ಗೋಣಿಕೊಪ್ಪ ವರದಿ, ಡಿ. ೧೨: ರಾಷ್ಟಿçÃಯ ಸೇವಾ ಯೋಜನೆ ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಲು ಅವಕಾಶ ಇದೆ ಎಂದು ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪಿ. ಕೇಶವ ಕಾಮತ್ ಸಲಹೆ ನೀಡಿದರು. ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ಶೈಕ್ಷಣಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎನ್ ಎಸ್‌ಎಸ್ ಮೂಲಕ ಎಲ್ಲರೊಂದಿಗೆ ಬೆರೆಯಲು ಅವಕಾಶ ದೊರೆಯುತ್ತದೆ. ಇದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಸಮಾಜ ಸೇವೆ ಮಾಡಲು ಮೂಲ ಕಾರಣವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸೇವಾ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು. ಬೋಧಕರ ಸಲಹೆ ಪಾಲನೆ ಕೂಡ ಅಗತ್ಯ ಎಂದರು. ಪ್ರಾಂಶುಪಾಲ ಮಾಳೇಟೀರ ಬಿ. ಕಾವೇರಪ್ಪ ಮಾತನಾಡಿ, ಸೇವಾ ಭಾವನೆ ಮೈಗೂಡಿಸಿಕೊಳ್ಳಲು ಶಿಕ್ಷಣ ಸಂದರ್ಭ ದೊರೆಯುವ ಅವಕಾಶ ವನ್ನು ಬಳಸಿಕೊಂಡು ಸಮಾಜಕ್ಕೆ ನಮ್ಮಿಂದ ಆಗುವ ಸೇವೆ ನೀಡಲು ಮುಂದಾಗಬೇಕು ಎಂದರು. ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಸೇವಾ ಭಾವನೆಗೆ ಸಮಾಜದಿಂದ ಸ್ಪಂದನ ದೊರೆಯ ದಿದ್ದಾಗ ಮನೋಬಲ ಹೆಚ್ಚಿಸಿಕೊಳ್ಳುವ ಗುಣ ಹೆಚ್ಚಿಸಿಕೊಳ್ಳಬೇಕಿದೆ. ಜೀವನ ಪರ್ಯಂತ ಸಮಾಜಕ್ಕೆ ಸಣ್ಣಮಟ್ಟದ ಸೇವೆ ನೀಡಲು ಆತ್ಮಸ್ಥೆöÊರ್ಯ ಅವಶ್ಯಕವಾಗಿದೆ. ಮನೋಸ್ಥೆöÊರ್ಯ ಕುಗ್ಗಿಸುವ ಪ್ರಯತ್ನ ನಡೆಯುವಾಗ ಆತ್ಮಾವಲೋಕನ ಮಾಡಿಕೊಂಡು ಮುಂದುವರಿಯಬೇಕಿದೆ. ಪರಿಸ್ಥಿತಿ ನಿಭಾಯಿಸುವ ಕಲೆ ಮೈಗೂಡಿಸಿ ಕೊಳ್ಳಬೇಕು ಎಂದರು.

ಆAತರಿಕ ಗುಣಾತ್ಮಕ ಭರವಸೆ ಸಮಿತಿ ಸಂಚಾಲಕಿ ಕುಪ್ಪಣಮಾಡ ಭಾರತಿ ಮಾತನಾಡಿ, ಎನ್‌ಎಸ್‌ಎಸ್ ಘಟಕದಿಂದ ಕಲಿಯುವ ಶಿಕ್ಷಣ ಬದುಕಿಗೆ ಹೆಚ್ಚು ಪ್ರಯೋಜನವಿದೆ ಎಂದು ಅರಿತು ಮುಂದುವರಿಯಬೇಕು ಎಂದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಮಂದೇಯAಡ ವನಿತ್‌ಕುಮಾರ್ ಎನ್‌ಎಸ್‌ಎಸ್ ಘಟಕದ ಬೆಳವಣಿಗೆ, ಯೋಜನೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಎನ್‌ಎಸ್‌ಎಸ್ ಅಧಿಕಾರಿ ಎನ್. ಪಿ. ರೀತಾ ಇದ್ದರು.