ಮಡಿಕೇರಿ, ಡಿ.೧೨: ಪ್ರಬಲ ರಾಯಭಾರಿಗಳಂತಿರುವ ಹಳೆಯ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬAಧವನ್ನು ಹೊಂದುವುದರಿAದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮತ್ತು ಯಶಸ್ಸಿಗೆ ಸಹಕಾರಿಯಾಗಲಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕೆÀ್ಷ ಡಾ.ಪಾರ್ವತಿ ಅಪ್ಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು, ಹಳೆಯ ವಿದ್ಯಾರ್ಥಿಗಳು ನಮ್ಮ ಹಿಂದಿನವರಲ್ಲ ಅವರು ನಮ್ಮ ಭವಿಷ್ಯ. ವಿದ್ಯಾರ್ಥಿ ಸಂಘ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯವನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದರು.

ಸಂಘ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿತ್ತು, ಆದರೆ ಕೋವಿಡ್ ನಿರ್ಬಂಧಗಳಿAದಾಗಿ ಆಯೋಜಿಸಲು ಸಾಧ್ಯವಾಗಲಿಲ್ಲ. ಆದರೂ ಆನ್‌ಲೈನ್ ಮೂಲಕ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ನಿರಂತರ ಚಟುವಟಿಕೆಯಿಂದಿರಲು ಪ್ರಯತ್ನಿಸಿದೆ. ಹಳೆಯ ವಿದ್ಯಾರ್ಥಿಗಳು ಸಂಘಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸಹಕರಿಸುವಂತೆ ಡಾ.ಪಾರ್ವತಿ ಅಪ್ಪಯ್ಯ ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾವೀರ ಚಕ್ರ ಪುರಸ್ಕೃತ ಲೆ.ಕ.ಪುಟ್ಟಿಚಂಡ ಎಸ್. ಗಣಪತಿ, ೧೯೯೩ರಲ್ಲಿ ಫೀ.ಮಾ.ಕೆ.ಎಂ ಕಾರ್ಯಪ್ಪ ಕಾಲೇಜು ಖಾಸಗಿ ಕಾಲೇಜು ಆಗಿ ಸ್ಥಾಪನೆಗೊಂಡಿತು. ಈ ಕಾಲೇಜಿನಲ್ಲಿ ಶಿಕ್ಷಣ ಪಡೆದವರು ದೇಶದ ಯಾವುದೇ ಭಾಗದಲ್ಲಾದರೂ ಉನ್ನತ ಹುದ್ದೆ ಅಲಂಕರಿಸುವ, ಜೀವಿಸುವ ಸಾಮರ್ಥ್ಯ ಪಡೆಯುತ್ತಾರೆ. ಉತ್ತಮ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆ ಗಳಿಗೂ ಹೆಚ್ಚಿನ ಪ್ರಾಶಸ್ತ÷್ಯ ನೀಡಲಾಗುತ್ತಿದೆ ಎಂದರು.

ಹೊಸ ಆವಿಷ್ಕಾರ, ಸಂಶೋಧನೆ ಗಳಲ್ಲಿ ಈ ಕಾಲೇಜು ಸದಾ ಮುಂದಿದೆ. ಹಳೆ ವಿದ್ಯಾರ್ಥಿ ಸಂಘವು ಕ್ರಿಯಾಶೀಲ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ನೆನಪುಗಳ ಮೆಲುಕು ವಿಶೇಷ ಸುದ್ದಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಡಿಸಿಪಿ ಬಾಚಮಂಡ ಎ.ಪೂಣಚ್ಚ ಹಿಂದಿನಿAದಲೂ ಫೀ.ಮಾ. ಕಾರ್ಯಪ್ಪ ಕಾಲೇಜು ಶಿಸ್ತಿಗೆ ಖ್ಯಾತಿ ಪಡೆದಿದ್ದು, ಅದರಂತೆ ನಡೆದುಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ದಂತ ವೈದ್ಯ ಡಾ.ಅನಿಲ್ ಚೆಂಗಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ನಿಖಿಲ್ ನಾಚಪ್ಪ, ಅಹಲ್ಯ ಅಪ್ಪಚ್ಚು, ಜತೀನ್ ಬೋಪಣ್ಣ, ವಿಶಾಲ್ ಪ್ರಕಾಶ್, ಸೌಮ್ಯ, ಡಾಯನ ಆಂಟೋಣಿ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಅಲ್ಲದೇ ಕೋವಿಡ್ ಸಂದರ್ಭ ಆನ್‌ಲೈನ್ ಮೂಲಕ "ಕೋವಿಡ್" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲಾಗಿದ್ದು, ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾನ ನೀಡಲಾಯಿತು.

ಸಂತೋಷ ಕೂಟದ ಪ್ರಯುಕ್ತ ಸಂಘದ ಸದಸ್ಯರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷ ಎನ್.ಡಿ.ಚರ್ಮಣ ಹಾಗೂ ಸಂಘದ ನಿರ್ದೇಶಕರು ಹಾಜರಿದ್ದರು.

ಸಂಘದ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡನೆ ಮಾಡಿದರು. ಚಿತ್ರ ಸುಜನ್ ಕಾರ್ಯಕ್ರಮ ನಿರೂಪಿಸಿ, ವಿಷ್ಮ ವಂದಿಸಿದರು.

ಸAಘದ ಸಭೆ

ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಘದ ಸಭೆ ನಡೆಸಿ ಕಾರ್ಯಪ್ಪ ಕಾಲೇಜನ್ನು ಅಟೋನಮಿಸ್ ಮಾಡಲು ಹಾಗೂ ಕಾಲೇಜಿನಿಂದ ವರ್ಗವಣೆ ಯಾದ ಸ್ಥಾನಕ್ಕೆ ಯಾವುದೇ ಉಪನ್ಯಾಸಕರ ನೇಮಕ ಆಗದೆ ಇರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವರ್ಗಾವಣೆಯಾದ ಉಪನ್ಯಾಸಕರನ್ನೆ ಮರು ನೇಮಕ ಮಾಡುವಂತೆ ಮಂಗಳೂರು ಕುಲಪತಿಗಳಿಗೆ ಮನವಿ ನೀಡಲು ನಿರ್ಧರಿಸ ಲಾಯಿತು. ಹಳೆ ವಿದ್ಯಾರ್ಥಿಗಳ ಸಂಘ ೨೫ವರ್ಷ ಪೂರೈಸಿರುವುದರಿಂದ ಬೆಳ್ಳಿಹಬ್ಬದ ಪ್ರಯುಕ್ತ ಕಾಲೇಜಿನಲ್ಲಿ ನೂತನ ಕೊಠಡಿ ನಿರ್ಮಾಣ, ಸುವರ್ಣ ಸಂಭ್ರಮದ ವಿಶೇಷ ಸಂಚಿಕೆ ಬಿಡುಗಡೆ ಮತ್ತು ಎಲ್ಲಾ ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಉತ್ತಮ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.