ಮಡಿಕೇರಿ, ಡಿ. ೧೨: ಪ್ರಸ್ತುತ ಕುಶಾಲನಗರದ ಉದ್ಯಮಿಗಳಾದ ಪುಂಡರೀಕಾಕ್ಷ ಮತ್ತು ಶೈಲಜ (ವಿನಾಯಕ ಸ್ಟೀಲ್ಸ್) ಅವರ ಅಳಿಯ ಕ್ಯಾಪÀ್ಟನ್ ಸತೀಶ್ ಅವರು ಭಾರತೀಯ ರಕ್ಷಣಾ ಇಲಾಖೆಯಲ್ಲಿ ಕಮಿಷನ್ಡ್ ಅಧಿಕಾರಿಯಾಗಿ ಕ್ಯಾಪ್ಟನ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಮೇಜರ್ ಆಗಿ ಬಡ್ತಿ ಹೊಂದಿದ್ದಾರೆ.

ಕ್ಯಾಪ್ಟನ್ ಸತೀಶ್ ಡಿ. ಅವರು ೨೦೧೫ರಲ್ಲಿ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಯಶಸ್ವಿಯಾಗಿ ಭಾರತ ರಕ್ಷಣಾ ಇಲಾಖೆಯು ನಡೆಸುವ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಸಂದರ್ಶನವನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅಂದಿನ ರಾಷ್ಟçಪತಿಗಳಿಂದ ಭಾರತೀಯ ಕಮಿಷನ್ಡ್ ಅಧಿಕಾರಿಯಾಗಿ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಂಡಿದ್ದರು.

ಇವರು ಜಮ್ಮು-ಕಾಶ್ಮೀರದ ಭಯೋತ್ಪಾದನಾ ನಿಗ್ರಹ ದಳದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಸರ್ಕಾರವು ೨೦೧೭ರಲ್ಲಿ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿ ವಿಶೇಷ ಸೇವಾ ಪದಕವನ್ನು ನೀಡಿ ಗೌರವಿಸಿತ್ತು.

ನಂತರ ೨೦೨೧ ರಿಂದ ಇವರನ್ನು ವಿಶೇಷ ಅಧಿಕಾರಿಯಾಗಿ ಬೆಂಗಳೂರಿಗೆ ನಿಯೋಜಿಸಿದೆ.

ಮೇಜರ್ ಸತೀಶ್ ಅವರ ಪತ್ನಿ ಪಾವನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಶಾಲನಗರದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.