ಮಡಿಕೇರಿ, ಡಿ. ೧೨: ದೇವಾಟ್‌ಪರಂಬುವಿನಲ್ಲಿ ಟಿಪ್ಪುವಿನಿಂದ ಕೊಡವರ ನರಮೇಧವಾದ ದಿನ ಡಿ.೧೨ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿದವರಿಗೆ ಪುಷ್ಪ ನಮನ ಸಲ್ಲಿಸಿತು. ಘೋರ ದುರಂತ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.

ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಮತ್ತು ಟಿಪ್ಪುವಿನ ಕುತಂತ್ರದಿAದ ದೇವಾಟ್‌ಪರಂಬುವಿನಲ್ಲಿ ನಡೆದ ಕೊಡವ ಬುಡಕಟ್ಟು ಜನಾಂಗದ ಹತ್ಯಾಕಾಂಡ ಇತಿಹಾಸದಲ್ಲಿ ಮರೆಯಲಾಗದ ಆಘಾತಕಾರಿ ಅಧ್ಯಾಯವಾಗಿದೆ. ಇದು ಸೂರ್ಯ ಮತ್ತು ಚಂದ್ರರು ಇರುವವರೆಗೆ ಎಂದಿಗೂ ಮಾಸದ ಗಾಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಿಖರವಾಗಿ ೨೩೬ ವರ್ಷಗಳ ಹಿಂದೆ ೧೭೮೫ರ ಡಿ.೧೨ ರಂದು ದೇವಾಟ್‌ಪರಂಬು ದುರಂತ ಸಂಭವಿಸಿದ್ದು, ಕೊಡವರ ಪಾಲಿಗೆ ಇದು ದುಃಖಕರ ದಿನವೆಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಲಾಯಿತು.

ದೇವಾಟ್‌ಪರAಬ್‌ನಲ್ಲಿ ಅಂತಾರಾಷ್ಟ್ರೀಯ ಕೊಡವ ನರಮೇಧ ಸ್ಮಾರಕ ನಿರ್ಮಾಣ ಮಾಡಬೇಕು. ಮಡಿಕೇರಿ ಕೋಟೆ, ನಾಲ್ನಾಡ್ ಅರಮನೆ ಮತ್ತು ದೇವಾಟ್‌ಪರಂಬುವಿನಲ್ಲಿ ನಡೆದ ಕೊಡವರ ಹತ್ಯಾ ಪ್ರಕರಣಗಳನ್ನು ಯುಎನ್‌ಒ ಮತ್ತು ಭಾರತ ಸರಕಾರ ಜಂಟಿಯಾಗಿ ಖಂಡಿಸಬೇಕು. ಯುಎನ್‌ಒದ ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಎರಡೂ ದುರಂತಗಳನ್ನು ಸೇರಿಸಬೇಕು. ಪ್ರಸ್ತುತ ಫ್ರೆಂಚ್ ಸರಕಾರ, ಕೆಳದಿ ರಾಯಲ್ಸ್, ಹೈದರ್ ಹಾಗೂ ಟಿಪ್ಪುವಿನ ಉಸ್ತುವಾರಿಗಳು ಕೊಡವ ಬುಡಕಟ್ಟು ಜನಾಂಗದ ಬಳಿ ಕ್ಷಮೆ ಕೇಳಬೇಕು. ಹಿಂದಿನವರು ಮಾಡಿದ ಅಪರಾಧಕ್ಕಾಗಿ ಪಶ್ಚಾತ್ತಾಪ ಪಡುವ ಮೂಲಕ ಫ್ರೆಂಚ್ ಸರಕಾರ ಕೊಡವ ನರಮೇಧ ಸ್ಮಾರಕ ಸ್ಥಾಪನೆಗೆ ಕೊಡುಗೆ ನೀಡಬೇಕು. ಸ್ಟೇಟ್‌ಕ್ರಾಫ್ಟ್ ನ್ನು ಮುನ್ನಡೆಸುತ್ತಿರುವ ಟಿಪ್ಪು ಮತ್ತು ಕೆಳದಿ/ಪಾಲೇರಿ ರಾಜಮನೆತನದ ಪಾಲಕರು ಸಹ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ನಾಚಪ್ಪ ಒತ್ತಾಯಿಸಿದರು. ನೂರಂಬಡನಾಡಿನ ಕಲಿಯಂಡ ಪ್ರಕಾಶ್, ಬೇರಳಿನಾಡಿನ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ (ನಿವೃತ್ತ), ಅರೆಯಡ ಗಿರೀಶ್, ಅರೆಯಡ ಸವಿತಾ ಗಿರೀಶ್ ಮತ್ತು ಪಾಡಿನಾಡಿನ ಅಪ್ಪಾರಂಡ ಶ್ರೀನಿವಾಸ್, ಪಟ್ಟಮಾಡ ಕುಶ, ಮಂದಪAಡ ಮನೋಜ್, ಲೋಕೇಶ್, ಬೆಪ್ಪುನಾಡಿನ ಪುಟ್ಟಿಚಂಡ ಡಾನ್ ದೇವಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದವರು, ಪುಷ್ಪ ನಮನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.