ಮಡಿಕೇರಿ, ಡಿ. ೧೨: ದೇವಾಟ್‌ಪರಂಬುವಿನಲ್ಲಿ ನಡೆದಿರುವ ಕೊಡವರ ನರಮೇಧದಲ್ಲಿ ಸ್ವರ್ಗೀಯರಾಗಿರುವ ಹಿರಿಯ ಚೇತನಗಳಿಗೆ ಇಂದು ಜಿಲ್ಲೆಯ ಹಲವೆಡೆ ಕೊಡವ ಜನಾಂಗದವರು ಶಾಂತಿ ಕೋರಿ ನಮನ ಸಲ್ಲಿಸಿದರು.
ಇದರಂತೆ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಶಾಂತಿ ಪೂಜೆ ನೆರವೇರಿಸಲಾಯಿತು. ಅಲ್ಲದೆ ಐನ್‌ಮನೆ ಸೇರಿದಂತೆ ಇತರರು ತಮ್ಮ ತಮ್ಮ ಮನೆಗಳಲ್ಲಿ ದೀಪವಿರಿಸಿ ನಮನ ಸಲ್ಲಿಸುವದರೊಂದಿಗೆ ಶಾಂತಿ ಕೋರಲಾಯಿತು.
ಸಂಜೆ ೭ ಗಂಟೆಗೆ ಜನಾಂಗದವರು ತಮ್ಮ ಮನೆಗಳಲ್ಲಿ ದೀಪವಿರಿಸಿ ಪ್ರಾರ್ಥನೆ ಸಲ್ಲಿಸಲು ಕರೆಯನ್ನು ನೀಡಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಕಳೆದ ವರ್ಷವೂ ಡಿಸೆಂಬರ್ ೧೨ ರಂದು ಈ ಕರೆಯನ್ನು ಹಲವು ಸಂಘಟನೆಗಳು ನೀಡಿದ್ದು, ದೇವಾಟ್‌ಪರಂಬು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ನಮನ ಸಲ್ಲಿಸಲಾಗಿತ್ತು. ಮಡಿಕೇರಿಯ ಕಾವೇರಿ ಬಡಾವಣೆಯಲ್ಲಿ ಜನಾಂಗದ ಹಲವರು ಸೇರಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಿದರು.