ಮಡಿಕೇರಿ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ನೀಲಗಿರಿಯಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ದೇಶದ ಹೆಮ್ಮೆಯ ಸಿ.ಡಿ.ಎಸ್. ಜ. ಬಿಪಿನ್ ರಾವತ್ ಮತ್ತವರ ಪತ್ನಿ ಮತ್ತು ಇತರ ೧೧ ಮಂದಿ ಸೇನಾಧಿಕಾರಿಗಳು ಮತ್ತು ಸೇನಾಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹುತಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿ, ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಅನಂತ್ ಊರುಬೈಲು ಜನರಲ್ ಬಿಪಿನ್ ರಾವತ್‌ರವರ ವ್ಯಕ್ತಿತ್ವ, ದೇಶದ ರಕ್ಷಣೆಗೆ ಅವರ ಕೊಡುಗೆ ಮತ್ತು ಬದ್ಧತೆಯನ್ನು ಸ್ಮರಿಸಿದರು.