ಮಡಿಕೇರಿ, ಡಿ. ೧೨: ಜೈಪುರದಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಗಳಿಸಿರುವ ಬಾಳಾಜಿ ಗ್ರಾಮದ ಕೊಣಿಯಂಡ ಕಾವ್ಯ ಸಂಜು ಅವರನ್ನು ಸೋಮವಾರಪೇಟೆಯ ಜೆ.ಸಿ.ಐ. ಪುಷ್ಪಗಿರಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜೆ.ಸಿ.ಐ. ಅಧ್ಯಕ್ಷೆ ಮಾಯಾ ಗಿರೀಶ್, ಪದಾಧಿಕಾರಿ ಉಷಾರಾಣಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.