ಮಡಿಕೇರಿ, ಡಿ. ೧೨: ಅಮ್ಮತ್ತಿ ಕೊಡವ ಸಮಾಜದಲ್ಲಿ ಹಿರಿಯರ ವಿಶ್ರಾಂತಿ ಕೇಂದ್ರದ ಮಹಾಸಭೆ ನಡೆಯಿತು. ಅಧ್ಯಕ್ಷತೆಯನ್ನು ಚೋವಂಡ ಯು. ಗಣೇಶ್ ವಹಿಸಿದ್ದರು. ಮಹಾಸಭೆಯಲ್ಲಿ ದಾನಿಗಳಾದ ನೆಲ್ಲಮಕ್ಕಡ ಪಾರ್ವತಿ ಕಾರ್ಯಪ್ಪ, ಮಾದಪಂಡ ಪಿ. ಗಣೇಶ್ ಹಾಗೂ ಕಾವಡಿಚಂಡ ಯು. ಗಣಪತಿ ಇವರುಗಳನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ವರದಿಯನ್ನು ಚೇಂದAಡ ದೊರೆ ತಿಮ್ಮಯ್ಯ ವಾಚಿಸಿದರು. ಆಡಿಟ್ ಹಾಗೂ ಲೆಕ್ಕ ಪತ್ರವನ್ನು ಐನಂಡ ಪಿ. ಗಣಪತಿ, ನೆಲ್ಲಮಕ್ಕಡ ಸಿ. ಬೊಳ್ಳಿಯಪ್ಪ ಮಂಡಿಸಿದರು. ನೆಲ್ಲಮಕ್ಕಡ ವಿವೇಕ್ ಪ್ರಾರ್ಥಿಸಿ, ಮುಕ್ಕಾಟಿರ ಎ. ಸಂತೋಷ್ ಸ್ವಾಗತಿಸಿ, ಮಂಡೇಪAಡ ಲಾಲ ಮಾಚಯ್ಯ ವಂದಿಸಿದರು.