ಗೋಣಿಕೊಪ್ಪ, ಡಿ. ೧೩: ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ೫ನೇ ಮತ್ತು ೬ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ‘ಎಂಬೆಡೆಡ್ ಸಿಸ್ಟಮ್ ಡಿಸೈನ್’ ಎಂಬ ವಿಷಯದಲ್ಲಿ ನಾಲ್ಕು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಾಪಕರಾದ ಅರುಲಾಲನ್ ರಾಜನ್, ದಿಪೇಶ್ ಅಗರ್ವಾಲ್, ವಿಭೋರ್ ಜೈನ್, ಎಂ.ಡಿ. ಆದಿತ್ಯ, ಶ್ರೇಯಸ್ ಕುಳೂರ್ ಭಾಗವಹಿಸಿದ್ದರು.

ಕೊಡವ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಎಂ. ಸಿ ಕಾರ್ಯಪ್ಪ ರಿಸರ್ಚ್ ಆಕ್ಟಿವಿಟಿ ಸೆಂಟರ್ ಇನ್ ಎಲೆಕ್ಟಾçನಿಕ್ಸ್ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಪಾಂ್ರಶುಪಾಲ ಎಂ. ಬಸವರಾಜು, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಎಸ್.ಎಸ್. ದಿವಾಕರ್, ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಇದ್ದರು.