ಗೋಣಿಕೊಪ್ಪಲು/ ಬಾಳೆಲೆ, ಡಿ.೧೩: ಹೆಣ್ಣು ಚಿರತೆಯೊಂದು (೫) ತೆರೆದ ಬಾವಿಯಲ್ಲಿ ಬಿದ್ದು ಅಸು ನೀಗಿದ ಘಟನೆ ದ.ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೂರು ಗ್ರಾಮದಲ್ಲಿ ನಡೆದಿದೆ.

ಬಾಳೆಲೆ ಸನಿಹ ಮಲ್ಲೂರು ಗ್ರಾಮದ ಮಲಚೀರ ಶರಣು ಬೆಳ್ಳಿಯಪ್ಪ ಅವರ ಕಾಫಿ ತೋಟದಲ್ಲಿರುವ ತೆರೆದ ಬಾವಿಗೆ ಆಕಸ್ಮಿಕವಾಗಿ ಚಿರತೆವೊಂದು ಬಿದ್ದಿದೆ. ನಂತರ ಹೊರ ಬರಲಾಗದೇ ಮೃತಪಟ್ಟಿದೆ.

ಮನೆಯ ಮಾಲೀಕರು ಎಂದಿನAತೆ ತೋಟದ ಬಳಿ ತೆರಳಿದಾಗ ಚಿರತೆಯು ಬಾವಿಯಲ್ಲಿ ಸತ್ತು ಬಿದ್ದಿರುವುದು ಗೋಚರಿಸಿದೆ.

ಕೂಡಲೇ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೆಕ್ಕೇರ ಸೂರ್ಯ ಅಯ್ಯಪ್ಪ ಹಾಗೂ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ ನವರಿಗೆ ಮನೆಯ ಮಾಲೀಕರು ಸುದ್ದಿ ಮುಟ್ಟಿಸಿದ್ದಾರೆ. ಚಿರತೆ ಬಿದ್ದು ಸತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚೆಕ್ಕೇರ ಸೂರ್ಯ ಹಾಗೂ ಕಾಟಿಮಾಡ ನಾಳೆ ಪಾಕ ಉತ್ಸವ

ಸುಂಟಿಕೊಪ್ಪ, ಡಿ. ೧೩: ಚೇರಂಬಾಣೆ ಸಮೀಪವಿರುವ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕೋತ್ಸವ ತಾ. ೧೫ರಂದು ನಡೆಯಲಿದೆ. ದಿನದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಕೋವಿಡ್ ನಿಯಮ ಪಾಲಿಸಿಕೊಂಡು ಪೂಜಾ ಕಾರ್ಯ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.