ನಾಪೋಕ್ಲು, ಡಿ. ೧೩ : ಹಳೇ ತಾಲೂಕಿನಿಂದ ಕಕ್ಕಬ್ಬೆಗೆ ಹೋಗುವ ರಾಜ್ಯ ಹೆದ್ದಾರಿಯ ಅಕ್ಕಿ ಗಿರಣಿ ಬಳಿಯ ತಿರುವಿನಲ್ಲಿ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ನಿಂತು ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಇಲ್ಲಿ ರಸ್ತೆಯು ಗುಂಡಿ ಬಿದ್ದು ಅಪಾಯವನ್ನು ತಪ್ಪಿಸಲು ಪಕ್ಕದ ಮನೆಯವರು ಕಲ್ಲುಗಳನ್ನು ರಸ್ತೆಗೆ ಹಾಕಿ ಅಪಾಯವನ್ನು ತಪ್ಪಿಸಲು ಕ್ರಮಕೈಗೊಂಡಿದ್ದಾರೆ. ಈ ದಾರಿಯಲ್ಲಿ ನಾಗರಿಕರು ಮತ್ತು ಶಾಲಾ ಕಾಲೇಜು ಮಕ್ಕಳು ನಡೆದುಕೊಂಡು ಹೋಗಬೇಕಿದ್ದು, ಕೆಸರಿನ ನೀರಿನಿಂದ ಮಕ್ಕಳ ಬಟ್ಟೆಗೆ ನೀರು ಹಾರಿ ಶಾಲೆಗೆ ಹೋಗದೇ ಮರಳಿ ಮನೆಗೆ ಹೋದ ನಿದರ್ಶನ ಇದೆ. ಇಲ್ಲಿ ಈಗಾಗಲೇ ಅಪಘಾತ ಸಂಭವಿಸಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚರಂಡಿ ಇಲ್ಲದೆ ರಸ್ತೆಯಲ್ಲಿ ಕೆಸರು ನೀರು ನಿಂತಿರುವುದು.

ರಸ್ತೆ ಬದಿಯಲ್ಲಿ ಚರಂಡಿ ಇಲ್ಲದೆ ಮಳೆಗಾಲ ದಲ್ಲಿ ನೀರು ನಿಂತು ಗುಂಡಿ ಗೋಚರಿಸದೇ ಇರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಯಾಗಿದೆ. ಕೂಡಲೇ ಚರಂಡಿ ಯನ್ನು ನಿರ್ಮಿಸಿ ಅನುಕೂಲ ಮಾಡಿಕೊಡ ಬೇಕಾಗಿದೆ ಎಂದು ಆಟೋ ಚಾಲಕರು ಒತ್ತಾಯಿಸಿ ದ್ದಾರೆ. -ದುಗ್ಗಳ