ಚೆಯ್ಯಂಡಾಣೆ, ಡಿ. ೧೨: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ವಾರ್ಷಿಕ ಮಹಾಸಭೆ ಹಾಗೂ ೫೦ನೇ ಯುಎಇ ರಾಷ್ಟಿçÃಯ ದಿನಾಚರಣೆ ಯನ್ನು ಇತ್ತೀಚಿಗೆ ದುಬೈ ದೇರಾ ದಲ್ಲಿರುವ ಲ್ಯಾಂಡ್ ಮಾರ್ಕ್ ಪ್ಲಾಝಾ ಹೋಟಲ್ ಸಭಾಂಗಣದಲ್ಲಿ ನಡೆಸಲಾಯಿತು. ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಫಿ ಸಖಾಫಿ ಕೊಂಡAಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಹುಲ್ ಹಮೀದ್ ಸಖಾಫಿ ಮಾದಾಪುರ ಕೊಡಗು ಸುನ್ನಿ ವೆಲ್ಫೇರ್ ಮತ್ತು ಯುಎಇ ರಾಷ್ಟಿçÃಯ ದಿನದ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.

ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸ್ವಾಗತಿಸಿ,ವರದಿ ವಾಚಿಸಿದರು,ಕೋಶಾಧಿಕಾರಿ ಅಹ್ಮದ್ ಚಾಮಿಯಾಲ್ ಲೆಕ್ಕ ಪತ್ರ ಮಂಡನೆ ಮಾಡುವ ಮೂಲಕ ಸಭೆಯಲ್ಲಿ ಅಂಗೀಕಾರ ನೀಡಲಾಯಿತು.ಹಂಝ ಎಮ್ಮೆಮಾಡು ಕಾರ್ಯಕ್ರಮ ನಿರೂಪಿಸಿ,ಮುಜೀಬ್ ಕಡಂಗ ವಂದನಾರ್ಪಣೆಗೈದರು.

ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ಕೊಡಗಿನ ಅನಿವಾಸಿಗಳಾದ ಹಲವು ನಾಯಕರುಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು .

ಅಧ್ಯಕ್ಷರಾಗಿ ಉಸ್ಮಾನ್ ಹಾಜಿ ನಾಪೋಕ್ಲು, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಕೊಂಡAಗೇರಿ, ಕಾರ್ಯದರ್ಶಿಯಾಗಿ ಮುಜೀಬ್ ಕಡಂಗ, ಕೋಶಾಧಿಕಾರಿಯಾಗಿ ಅಹ್ಮದ್ ಚಾಮಿಯಾಲ್, ಸಲಹಾ ಸಮಿತಿಗೆ ಜಲೀಲ್ ನಿಝಾಮಿ ಎಮ್ಮೆಮಾಡು, ಹಮೀದ್ ನಾಪೋಕ್ಲು, ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ರಫೀಕ್ ಚಾಮಿಯಾಲ್, ಇಬ್ರಾಹಿಂ ನಾಪೋಕ್ಲು, ಉಪಾಧ್ಯಕ್ಷರುಗಳಾಗಿ ಅಲಿ ಎಮ್ಮೆಮಾಡು, ಹಂಝ ಪೊನ್ನಂಪೇಟೆ.

ಕ್ಯಾಬಿನೆಟ್ ಸದಸ್ಯರುಗಳಾಗಿ ಶಾಫಿ ಸಖಾಫಿ ಕೊಂಡAಗೇರಿ, ಇಸ್ಮಾಯಿಲ್ ಮೂರ್ನಾಡು, ಸಲೀಂ ಗುಂಡಿಕೆರೆ, ಮುಝಮ್ಮಿಲ್ ಚಾಮಿಯಾಲ್, ಹಂಝ ಎಮ್ಮೆಮಾಡು, ಇರ್ಶಾದ್ ಕೊಂಡAಗೇರಿ, ಅಶ್ರಫ್ ಕುಂಜಿಲ, ಹಾರಿಸ್ ಕುಂಜಿಲ, ನಾಸರ್ ಕುಂಜಿಲ, ಶಂಸು ಮಕ್ಕಿ ಕುಂಜಿಲ, ನಿಝಾರ್ ಗುಂಡಿಕೆರೆ, ಝುಬೈರ್ ಎಮ್ಮೆಮಾಡು, ಅಬ್ಬಾಸ್ ಸುಂಟಿಕೊಪ್ಪ, ಅರಾಫತ್ ನಾಪೋಕ್ಲು, ರಶೀದ್ ಸಅದಿ ಅಯ್ಯಂಗೇರಿ ಅವರುಗಳÀನ್ನು ಆಯ್ಕೆ ಮಾಡಲಾಯಿತು.