ಕಣಿವೆ, ಡಿ. ೧೩ : ಕಳೆದ ಆರೇಳು ತಿಂಗಳಿನಿAದ ಎಡಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಭೂಮಿಯೆಲ್ಲಾ ಶೀತಾಂಶಕ್ಕೆ ತುತ್ತಾಗಿದೆ. ಇದರಿಂದಾಗಿ ತೋಟಮಾಲೀಕರ ಕಪ್ಪು ಬಂಗಾರವೆAದೆ ಹೆಸರಾಗಿದ್ದ ಕಾಳು ಮೆಣಸು ಬಳ್ಳಿಗಳು ಶೀತಕ್ಕೆ ಸಿಲುಕಿ ನಿರ್ನಾಮಗೊಳ್ಳುತ್ತಿವೆ.

ಇದರಿಂದಾಗಿ ತೋಟ ಮಾಲೀಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಯಡವನಾಡು ಗ್ರಾಮದ ಪಾಣತ್ತಲೆ ಜನಾರ್ಧನ, ಪಾಣತ್ತಲೆ ಶಶಿಧರ್ ಮೊದಲಾದ ಬೆಳೆಗಾರರು ಕಳೆದ ಆರೇಳು ವರ್ಷಗಳಿಂದ ನೆಟ್ಟು ಕಷ್ಟಪಟ್ಟು ಆರು ಎಕರೆ ತೋಟದಲ್ಲಿ ಬೆಳೆಸಿದ್ದ ಕಾಳು ಮೆಣಸು ಬಳ್ಳಿಗಳು ನೆಲ ಕಚ್ಚಿವೆ. ಅಂದರೆ ತನ್ನ ತುಂಬೆಲ್ಲಾ ಫಸಲನ್ನು ಹೊತ್ತು ನಿಂತಿದ್ದ ಬಳ್ಳಿಗಳು ಹೆಚ್ಚಿನ ಶೀತಾಂಶಕ್ಕೆ ಸಿಲುಕಿ "ಶೀಘ್ರ ಸೊರಗು ರೋಗ" ಎಂಬ ವಿಚಿತ್ರ ರೋಗಕ್ಕೆ ಸಿಲುಕಿ ಹಾಳಾಗುತ್ತಿವೆ. ಈ ಬಳ್ಳಿಯ ಬುಡ ಕೊಳೆತ ವಾಸನೆಯೊಂದಿಗೆ ಶೀಘ್ರವಾಗಿ ಬಾಡುತ್ತಾ ಒಣಗಲಾರಂಭಿಸಿವೆ. ಇದರಿಂದಾಗಿ ಫಸಲು ಕಟ್ಟಿದ್ದ ಕಾಳುಮೆಣಸು ಗೊಂಚಲುಗಳ ರಾಶಿ ಬುಡದಲ್ಲೇ ಬಿದ್ದು ಹಾಳಾಗುತ್ತಿವೆ. ಇದರಿಂದಾಗಿ ಬೆಳೆಗಾರರಿಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಒAದು ಮೆಣಸು ಬಳ್ಳಿ ಫಲ ಕೊಡಲು ಕನಿಷ್ಟ ಮೂರು ವರ್ಷ ಬೇಕು. ಆದರೆ ಈ ಪಾಣತ್ತಲೆ ಸೋದರ ಕೃಷಿಕರು ಕಳೆದ ಐದಾರು ವರ್ಷಗಳಿಂದ ಜೋಪಾನ ಮಾಡಿ ಸಲಹಿದ್ದ ಈ ಕಾಳು ಮೆಣಸು ಬಳ್ಳಿಗಳು ಒಂದರ ಮೇಲೊಂದರAತೆ ದಿನೇ ದಿನೇ ಸೊರಗುತ್ತಿವೆ. ಮಾರಕವಾದ ಈ ರೋಗದ ವೈರಸ್ ಇಡೀ ತೋಟಕ್ಕಷ್ಟೇ ಅಲ್ಲ, ಇಡೀ ಗ್ರಾಮದ ಅಕ್ಕ ಪಕ್ಕದ ಗ್ರಾಮಗಳ ಕೃಷಿಕರು ಬೆಳೆದ ಕಾಳು ಮೆಣಸು ಬಳ್ಳಿಗಳಿಗೂ ಹರಡಿ ಬಹುತೇಕ ಕೃಷಿಕರಿಗೆ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ.

ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡಲೇ ನುರಿತ ತಜ್ಞರ ತಂಡವನ್ನು ತೋಟ ಬೆಳೆಗಾರರ ಬಳಿ ಕರೆದೊಯ್ದು ನೂತನವಾಗಿ ಆವಿಷ್ಕೃತ ರಾಸಾಯನಿಕಗಳನ್ನು ಉಚಿತವಾಗಿ ನೀಡುವ ಮೂಲಕ ಬೆಳೆ ಸಂಕಷ್ಟದಲ್ಲಿ ಸಿಲುಕಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.

ಬಳ್ಳಿಗಳು ವಿಚಿತ್ರ ಸೊರಗು ರೋಗಕ್ಕೆ ಸಿಲುಕಿದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ. ಬೆಳೆ ನಷ್ಟದ ಸಂಕಷ್ಟದಲ್ಲಿನ ರೈತರ ಹಾಗೂ ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ಗರಿಷ್ಠ ಪರಿಹಾರ ನೀಡುವ ಮೂಲಕ ಆಸರೆಯಾಗಬೇಕಿದೆ.

- ಕೆ.ಎಸ್. ಮೂರ್ತಿ