ಮಡಿಕೇರಿ, ಡಿ. ೧೨: ಪಯಸ್ವಿನಿ ಪ್ರಾ.ಕೃ.ಪ.ಸ. ಸಂಘದಿAದ ಅಸಂಘಟಿತ ವಲಯದಲ್ಲಿ ದುಡಿಯುವ ವರ್ಗಗಳನ್ನು ಕೇಂದ್ರ ಸರ್ಕಾರದ ಉಚಿತ ಇ-ಶ್ರಮ ಯೋಜನೆಯಡಿಯಲ್ಲಿ ಉಚಿತವಾಗಿ ನೋಂದಣಿ ಮಾಡುವ ಅಭಿಯಾನ ಸಹಕಾರ ಸಂಘದ ಚೆಂಬು ಮತ್ತು ಸಂಪಾಜೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅನಂತ್ ಊರುಬೈಲು, ಕೃಷಿ ಕೂಲಿ ಕಾರ್ಮಿಕ ವರ್ಗದವರೆಲ್ಲರೂ ಇ-ಶ್ರಮ ಮೂಲಕ ಪ್ರಧಾನಮಂತ್ರಿಗಳ ವಿಮಾ ಸೌಲಭ್ಯ, ಸಾಮಾಜಿಕ ಭದ್ರತಾ ಯೋಜನೆ, ವಿಶೇಷ ಸಂದರ್ಭದಲ್ಲಿ ಘೋಷಣೆಯಾಗ ಬಹುದಾದ ಪ್ಯಾಕೇಜ್ ಮುಂತಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಸAಘದ ಉಪಾಧ್ಯಕ್ಷ ರಾಜಾರಾಮ ಕಳಗಿ ಸ್ವಾಗತಿಸಿ, ಸ್ಪಾಟ್ ಕಂಪ್ಯೂಟರ್ ಮುಖ್ಯಸ್ಥ ಕಿಶೋರ್ ಕುಮಾರ್ ವಂದಿಸಿದರು. ಈ ಸಂದರ್ಭ ಸಂಸ್ಥೆಯ ಸಿಇಒ, ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ, ಫಲಾನುಭವಿಗಳು ಉಪಸ್ಥಿತರಿದ್ದರು.