ಮಡಿಕೇರಿ, ಡಿ. ೧೨: ಮತ್ತೊಬ್ಬರ ಹಕ್ಕುಗಳ ಬಗ್ಗೆ ಅರಿತುಕೊಳ್ಳದಿದ್ದರೆ ನಾವು ಮಾನವ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ. ಶಹಬರ್ ಪಾಷಾ ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಜ್ಯಶಾಸ್ತç ವಿಭಾಗ ಮತ್ತು ಮಾನವ ಹಕ್ಕುಗಳ ಸಂಘದ ಸಹಯೋಗದಲ್ಲಿ, ಮಾನವ ಹಕ್ಕುಗಳ ಜಾಗೃತಿ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮನುಷ್ಯರು ಮನುಷ್ಯರಾಗಿ ಬದುಕಲು ಅನಿವಾ ರ್ಯವಾಗಿರುವ ಮೂಲಭೂತ ಹಕ್ಕುಗಳನ್ನೇ ಮಾನವ ಹಕ್ಕುಗಳು ಎನ್ನಲಾಗಿದೆ ಎಂದರು.

ಈ ಹಕ್ಕುಗಳ ಮೂಲ ಉದ್ದೇಶವೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಗೌರವ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ರಾಷ್ಟç ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಮರಸ್ಯ, ಶಾಂತಿ ಭದ್ರತೆಯನ್ನು ಉತ್ತೇಜಿಸುವುದಾಗಿದ್ದು, ಈ ಹಕ್ಕುಗಳ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ಡಾ. ರಾಘವ ಬಿ. ವಹಿಸಿದ್ದರು. ರಾಜ್ಯಶಾಸ್ತç ಉಪನ್ಯಾಸಕ ರಘು ಧರ್ಮಸೇನ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತç ಉಪನ್ಯಾಸಕಿ ನಿವ್ಯಾ ಮೇದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ಹೆಚ್‌ಕೆಪಿ ವಿದ್ಯಾರ್ಥಿ ಅಮೃತ್ ರಾಜ್ ಪ್ರಾರ್ಥಿಸಿ, ಅಂತಿಮ ಇಎಸ್‌ಪಿ ವಿದ್ಯಾರ್ಥಿನಿ ಭುವನ ಎಸ್. ಸ್ವಾಗತಿಸಿದರು. ದ್ವಿತೀಯ ಹೆಚ್‌ಇಪಿ ವಿದ್ಯಾರ್ಥಿ ವಿನೋದ್ ಶೆಟ್ಟಿ ವಂದಿಸಿದರು. ಅಂತಿಮ ಕಲಾ ವಿಭಾಗದ ವಿದ್ಯಾರ್ಥಿಗಳಾದ ಸುಮನ್, ಯಶೋಧ, ಅಮೃತ, ಭುವನ ಮತ್ತು ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಮೇಘ ಅವರು ಮಾನವ ಹಕ್ಕು ಜಾಗೃತಿಯ ಕುರಿತು ಪೋಸ್ಟರ್‌ಗಳನ್ನು ತಯಾರಿಸಿ ಪ್ರದರ್ಶಿಸಿದರು.