ಮಡಿಕೇರಿ, ಡಿ. ೧೨: ರೋಟರಿ ವಲಯ ೬ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶನಿವಾರಸಂತೆ ರೋಟರಿ ಸಂಸ್ಥೆ ಪ್ರಥಮ ಮತ್ತು ಆಲೂರು ಸಿದ್ದಾಪುರ ರೋಟರಿ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಹುಣಸೂರು ರೋಟರಿ ಕ್ಲಬ್ ವತಿಯಿಂದ ಹುಣಸೂರಿನಲ್ಲಿ ಆಯೋಜಿಸಲಾಗಿದ್ದ ರೋಟರಿ ವಲಯ ೬ರ ಕ್ರಿಕೆಟ್ ಪಂದ್ಯಾವಳಿಯನ್ನು ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಉದ್ಘಾಟಿಸಿದರು. ಕ್ರೀಡೆಗಳು ಸ್ನೇಹ ಸಂಬAಧವನ್ನು ಗಟ್ಟಿಗೊಳಿಸಿ ಸೌಹಾದÀðತೆ ಬೆಸೆಯುತ್ತವೆ, ಚೈತನ್ಯ ತುಂಬಿ ಉತ್ಸಾಹ ಹೆಚ್ಚಿಸಿ ವಯಸ್ಸನ್ನು ಮರೆಮಾಚಿ ಯುವಕರ ಹುಮ್ಮಸ್ಸಿಗೆ ಕಾರಣವಾಗುತ್ತದೆ ಎಂದರು.

ರೋಟರಿ ಜಿಲ್ಲಾ ಸಂಸ್ಕಾರ್ ಯೋಜನೆಯ ಅಧ್ಯಕ್ಷ ಧರ್ಮಾಪುರ ನಾರಾಯಣ್, ವಲಯ ಕಾರ್ಯದರ್ಶಿ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಆನಂದ್, ವಲಯ ೬ರ ಕ್ರಿಕೆಟ್ ಸಮಿತಿ ಅಧ್ಯಕ್ಷ ಹರೀಶ್ ಮಾತನಾಡಿದರು. ಹುಣಸೂರು ರೋಟರಿ ಅಧ್ಯಕ್ಷ ಡಾ. ಬಸವರಾಜು ಸ್ವಾಗತಿಸಿ, ಕಾರ್ಯದರ್ಶಿ ಪಾಂಡುಕುಮಾರ್ ವಂದಿಸಿದರು. ಕ್ರಿಕೆಟ್ ಸಮಿತಿ ಅಧ್ಯಕ್ಷ ಚನ್ನಕೇಶವ ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದರು.

ಕುಶಾಲನಗರ, ಹುಣಸೂರು, ಕೆ.ಆರ್. ನಗರ, ಮಡಿಕೇರಿ ಮಿಸ್ಟಿಹಿಲ್ಸ್, ಗೋಣಿಕೊಪ್ಪ, ಕೊಡ್ಲಿಪೇಟೆ, ಸೋಮವಾರಪೇಟೆ, ಆಲೂರು ಸಿದ್ದಾಪುರ, ಶನಿವಾರಸಂತೆ, ತಂಡಗಳು ಪಾಲ್ಗೊಂಡು ಕ್ರೀಡೋತ್ಸಾಹ ಮೆರೆದವು. ಫೈನಲ್ ಪಂದ್ಯದಲ್ಲಿ ಶನಿವಾರಸಂತೆ ತಂಡವು ಆಲೂರು ಸಿದ್ದಾಪುರ ತಂಡದ ವಿರುದ್ಧ ಗೆಲವು ಸಾಧಿಸಿತು. ಸತತ ಮೂರನೇ ವಷÀðವೂ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಲೂರು ಸಿದ್ದಾಪುರ ರೋಟರಿ ತಂಡ ರನ್ನರ್ಸ್ ಸ್ಥಾನ ಪಡೆಯಿತು.