ಒಕ್ಕಲಿಗರ ಸಾಕ್ಷಿ ಪ್ರಜ್ಞೆಯಂತಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ತಾ.೧೨.೧೨.೨೦೨೧ರ ಭಾನುವಾರ ಚುನಾವಣೆ ನಡೆಯಲಿದ್ದು, ನನ್ನ ಹಿತೈಷಿಗಳು, ಸಮುದಾಯದ ಮುಖಂಡರು, ಜನಾಂಗ ಬಾಂಧವರು ಪ್ರೋತ್ಸಾಹಿಸಿದ ಮೇರೆ, ಈ ಸಾಲಿನ ಚುನಾವಣೆಗೆ ನಾನು ಪಕ್ಷಾತೀತವಾಗಿ ಎಲ್ಲರ ಬೆಂಬಲದಿAದ ಸ್ಪರ್ಧಿಸಿದ್ದೇನೆ.
ನಾನು ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಕೊಡಗಿನಿಂದ ಆಯ್ಕೆಯಾದಲ್ಲಿ, ರಾಜ್ಯ ಒಕ್ಕಲಿಗರ ಸಂಘದಿAದ ಲಭಿಸುವ ಎಲ್ಲಾ ಅನುದಾನ, ಸೌಲಭ್ಯಗಳು ಕೊಡಗಿನವರಿಗೆ ಸಿಗುವಂತೆ ಮಾಡುತ್ತೇನೆ. ಒಕ್ಕಲಿಗರ ಸಂಘದ ಶಾಲಾ ಕಾಲೇಜು, ವಿದ್ಯಾರ್ಥಿ ವಸತಿ ನಿಲಯ, ಆಸ್ಪತ್ರೆ, ಉದ್ಯೋಗ ಕ್ಷೇತ್ರದಲ್ಲಿ ಕೊಡಗಿನ ಒಕ್ಕಲಿಗ ಸಮುದಾಯಕ್ಕೆ ನಿಸ್ವಾರ್ಥವಾಗಿ ಶೇ. ೧೦೦ರಷ್ಟು ಆದ್ಯತೆ ನೀಡುತ್ತೇನೆ. ಇದರೊಂದಿಗೆ ಸಮುದಾಯದ ಸಂಸ್ಕೃತಿ, ಆಚಾರ ವಿಚಾರ, ಸಾಮಾಜಿಕ ಬೆಳವಣಿಗೆಗೆ ಶ್ರಮಿಸುತ್ತೇನೆ. ಎಂದಿನAತೆ ಸಮಾಜ ಸೇವೆಯಲ್ಲೂ ಮುಂದುವರೆಯುತ್ತೇನೆ ಎಂಬ ಸಂಕಲ್ಪ ಈ ಮೂಲಕ ನನ್ನದಾಗಿದೆ.
ಈ ಬಾರಿ ನಿಮ್ಮ ಆಯ್ಕೆ ರವೀಂದ್ರ ಹೆಚ್.ಎನ್. ಆಗಿರಲಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.