ಮಡಿಕೇರಿ, ಡಿ. ೧೧: ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಭಾರತೀಯ ರಕ್ಷಣಾ ಪಡೆಯ ಮೊದಲ ಸಿಡಿಎಸ್ ಜನರಲ್ ಬಿಪಿನ್ ಲಕ್ಷö್ಮಣ್ ಸಿಂಗ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ ೧೩ ಯೋಧರಿಗೆ ಜಿಲ್ಲೆಯ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುಷ್ಪ ಹಾಗೂ ನುಡಿ ನಮನದ ಮೂಲಕ ಅಗಲಿದ ಯೋಧರನ್ನು ಸ್ಮರಿಸಲಾಯಿತು.ಮಡಿಕೇರಿ: ಹೆಲಿಕಾಪ್ಟರ್ ಅವಘಡದಲ್ಲಿ ಮೃತರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಪ್ರಮುಖರುಗಳಿಗೆ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ದೇಶದ ರಕ್ಷಣೆ ವಿಷಯದಲ್ಲಿ ಬಿಪಿನ್ ರಾವತ್‌ರವರಿಗೆ ಇದ್ದ ಕಾಳಜಿಯನ್ನು ಸ್ಮರಿಸಿದರು.

ಕೊಡಗು ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ನಗರಾಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್, ಮಡಿಕೇರಿ ನಗರ ಕಾರ್ಯದರ್ಶಿಗಳಾದ ಉಮೇಶ್ ಸುಬ್ರಮಣಿ, ಅಪ್ಪಣ್ಣ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರಸಭಾ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.ವೀರಾಜಪೇಟೆ: ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕ ಮತ್ತು ರಾಷ್ಟಿçÃಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಅಮರ್ ಜವಾನ್ ಸ್ಮಾರಕದ ಬಳಿ ಹುತಾತ್ಮ ಯೋಧರನ್ನು ಸ್ಮರಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ. ಕೃಷ್ಣ, ಮಾಜಿ ಸೈನಿಕ ಕುಟ್ಟಂಡ ಲವ ಮಾತನಾಡಿದರು. ತಾಲೂಕು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಅನಿಲ್ ಸಿದ್ದಾಪುರ, ಆರ್.ಎಸ್.ಎಸ್.ನ ಪ್ರಮುಖರಾದ ಬಿ.ವಿ. ಹೇಮಂತ್, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘ ನಿಯಮಿತ ಸಂಸ್ಥೆಯ ಅಧ್ಯಕ್ಷ ಗಣೇಶ್ ನಂಜಪ್ಪ, ಭಾ.ಜ.ಪ. ತಾಲೂಕು ಕಾರ್ಯದರ್ಶಿ ಅಮ್ಮಣಿಚಂಡ ರಂಜು ಪೂಣಚ್ಚ ಹಾಗೂ ಸಾರ್ವಜನಿಕರು ಹಾಜರಿದ್ದರು.ಶನಿವಾರಸಂತೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಿವೃತ್ತ ಸೈನಿಕರ ಸಂಘದ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಘದ ಅಧ್ಯಕ್ಷ ಎ.ಎಸ್. ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್, ಸದಸ್ಯ ಎಸ್.ಎನ್. ರಘು ಮಾತನಾಡಿ, ಬಿಪಿನ್ ರಾವತ್ ಹಾಗೂ ಇತರ ಯೋಧರ ಸೇವೆಯನ್ನು ಸ್ಮರಿಸಿದರು. ಸಂಘದ ಕಾರ್ಯದರ್ಶಿ ಎಸ್.ಎನ್. ಪಾಂಡು, ನಿರ್ದೇಶಕರಾದ ಕೆ.ಡಿ. ಚಂದ್ರಪ್ಪ, ಎಲ್.ಪಿ. ತಿಮ್ಮಯ್ಯ, ಟಿ.ಎಸ್. ನಾಗರಾಜ್, ಬಿ.ಡಿ. ಪರಮೇಶ್, ಎಂ.ಕೆ. ಗಿರೀಶ್, ಎಲ್.ಎಸ್. ನಾಗರಾಜ್, ಹೆಚ್.ಎನ್. ಭೈರವ್, ಬಿ.ಆರ್. ಆನಂದ್, ಕೆ.ಟಿ. ಹರೀಶ್, ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಸಂದೀಪ್, ಬಿ.ಜೆ.ಪಿ. ಮುಖಂಡ ಯತೀಶ್ ಇದ್ದರು.ಪೊನ್ನಂಪೇಟೆ: ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳ ನಿಧನಕ್ಕೆ ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಸಿಸಿ ಘಟಕ ಹಾಗೂ ಕಾಲೇಜು ಸಿಬ್ಬಂದಿ ವರ್ಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳ ಬಳಿ ಜನರಲ್ ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಪ್ಪ ಮಾತನಾಡಿ ಬಿಪಿನ್ ರಾವತ್‌ರಂತಹ ಮಹಾನ್ ನಾಯಕನನ್ನು ಕಳೆದುಕೊಂಡಿರುವುದು ನಮ್ಮ ದೇಶಕ್ಕೆ ತುಂಬಲಾರದ ನಷ್ಟ. ದೇಶದ ರಕ್ಷಣೆಗೆ ಇವರು ತೆಗೆದುಕೊಂಡ ದಿಟ್ಟ ಕ್ರಮಗಳು ಶ್ಲಾಘನೀಯ ಎಂದರು. ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿದರು. ಈ ಸಂದರ್ಭ ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಎಂ.ಆರ್. ಆಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಕಾಲೇಜು ಅಧೀಕ್ಷಕ ಸೋಮನಾಥ್, ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸಿಬ್ಬಂದಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.ಮಡಿಕೇರಿ: ಕೊಡಗು ಜಿಲ್ಲಾ ಜೆಡಿಎಸ್ ವತಿಯಿಂದ ಮೊನ್ನೆ ದಿನ ದುರ್ಮರಣ ಹೊಂದಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ವೀರ ಯೋಧರಿಗೆ ಜಿಲ್ಲಾ ಜೆಡಿಎಸ್ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಖಜಾಂಚಿ ಡೆನ್ನಿ ಬರೋಸ, ಕಾರ್ಯದರ್ಶಿ ಸುನಿಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ನಗರ ಯುವ ಘಟಕದ ಅಧ್ಯಕ್ಷ ಮೋನಿಷ್, ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಖಲೀಲ್ ಬಾಷ, ಜಿಲ್ಲಾ ಮಹಿಳಾ ಎಸ್‌ಸಿ ಘಟಕ ಅಧ್ಯಕ್ಷೆ ಜಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.ನಾಪೋಕ್ಲು: ಮಾಜಿ ಸೈನಿಕರ ಸಂಘ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಅಗಲಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಸೇನಾಧಿಕಾರಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಿವೃತ್ತ ಸೇನಾಧಿಕಾರಿ ಮತ್ತು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕೊಂಡೀರÀ ನಾಣಯ್ಯ ಈ ಸಂದರ್ಭ ಮಾತನಾಡಿದರು. ಈ ಸಂದರ್ಭ ಸಂಘ ಪರಿವಾರದ ಕಂಗಾAಡ ಜಲಿ ಪೂವಪ್ಪ, ಕೆಲೇಟಿರ ಸಾಬು ನಾಣಯ್ಯ, ಕಿಶೋರ್ ಬೋಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಬಿ.ಎಂ. ಪ್ರತೀಫ್, ಕನ್ನಂಬಿರ ಸುಧಿ ತಿಮ್ಮಯ್ಯ, ನೀಲಮ್ಮ, ಪುಷ್ಪ, ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಕೆಟೋಳಿರ ಡಾಲಿ ಅಚ್ಚಪ್ಪ, ಖಜಾಂಚಿ ಅಬ್ದುಲ್ ಕರೀಂ, ಪಾಡಿಯಮ್ಮಂಡ ಮನು ಮಹೇಶ್, ಅರೆಯಡ ನಂದ, ಬಿ.ಜೆ.ಪಿ. ಶಕ್ತಿ ಕೇಂದ್ರದ ಉಪಾಧ್ಯಕ್ಷ ಕೆಲೇಟ್ಟೀರ ದೀಪು ದೇವಯ್ಯ, ಕುಂಡ್ಯೋಳAಡ ಗಿರೀಶ್, ಬಡ್ಡೀರ ಸುಬ್ಬಯ್ಯ, ಮಣವಟ್ಟೀರ ಮುತ್ತಣ್ಣ, ಬಿದ್ದಾಟಂಡ ವಿವೇಕ್, ಮಾಜಿ ಸೈನಿಕ ಬೊಟ್ಟೋಳಂಡ ರವಿ, ಬೊಳ್ಳೆಪಂಡ ಹರೀಶ್ ಮತ್ತಿತರರು ಇದ್ದರು.ಮೂರ್ನಾಡು: ಮೂರ್ನಾಡು ಪದವಿ ಕಾಲೇಜಿನಲ್ಲಿ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಸೇನಾಧಿಕಾರಿಗಳಿಗೆ ಸಂತಾಪ ಸೂಚಿಸಲಾಯಿತು. ಮೃತಪಟ್ಟ ಯೋಧರಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಒಂದು ನಿಮಿಷದ ಮೌನಾಚರಣೆ ಮಾಡಿ ಪುಷ್ಪನಮನ ಸಲ್ಲಿಸಿ ಅಗಲಿದ ಯೋಧರಿಗೆ ಗೌರವವನ್ನು ಸೂಚಿಸಲಾಯಿತು.

ಮಡಿಕೇರಿ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಹಾಗೂ ಇತರ ಸೇನಾಧಿಕಾರಿಗಳ ದುರಂತ ಮರಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎನ್‌ಸಿಸಿ ಕೆಡೆಟ್‌ಗಳು ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.ಗುಡ್ಡೆಹೊಸೂರು: ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ದಂಪತಿ ಹಾಗೂ ಇತರ ಸೇನಾಧಿಕಾರಿಗಳಿಗೆ ಗುಡ್ಡೆಹೊಸೂರಿನಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆ ಇಲ್ಲಿನ ವಿವೇಕಾನಂದ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯಿತು. ಈ ಸಂದರ್ಭ ಅಗಲಿದ ಆತ್ಮಗಳಿಗೆ ಶಾಂತಿ ಬಯಸಿ ಅವರ ಭಾವಚಿತ್ರಕ್ಕೆ ಪೂಜೆ ನಡೆಸಲಾಯಿತು.

ತಾಲೂಕು ಸೇವಾ ಪ್ರಮುಖ ಬೊಟ್ಟುಮನೆ ರಮೇಶ್ ಹಾಜರಿದ್ದು ಕಾರ್ಯಕ್ರಮ ಆಯೋಜನೆ ಮಾಡಿದರು. ಜಿ.ಎಂ. ವಿಶುಕುಮಾರ್ ಅವರು ಮಾತನಾಡಿದರು. ಈ ಸಂದರ್ಭ ಗ್ರಾಮಸ್ಥರು, ಮಾಜಿ ಸೈನಿಕರು ಹಾಜರಿದ್ದರು. ಸಮಿತಿಯ ಮಹೇಂದ್ರ, ಆದೇಶ, ಪ್ರಮೋದ್, ಜಿ.ಎಂ. ಸಲೀ, ರಂಜಯ್, ಅರುಣ್, ಗಣೇಶ್, ಬಿ.ಎಸ್. ಧನಪಾಲ್, ಮಾಜಿ ಸೈನಿಕರಾದ ಕೆ.ಕೆ. ಪೂವಯ್ಯ, ನಾಣಯ್ಯ, ತಿಮ್ಮಯ್ಯ ಮುಂತಾದವರು ಹಾಜರಿದ್ದರು.