*ಗೋಣಿಕೊಪ್ಪ, ಡಿ. ೧೦: ಬಾಬಾಸಾಹೇಬ ಅಂಬೇಡ್ಕರ್ ಅವರ ೬೫ನೇ ವರ್ಷದ ಪರಿನಿರ್ವಾಣ ದಿನವನ್ನು ಯರವ ಒಕ್ಕೂಟದ ವತಿಯಿಂದ ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಪಿ.ಎಸ್. ಮುತ್ತ ಮಾತನಾಡಿ, ಅಂಬೇಡ್ಕರ್ ಅವರ ಸಂಕಷ್ಟ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಶಿಕ್ಷಣದಿಂದ ಮಾತ್ರ ದಲಿತರು ಉದ್ದಾರವಾಗಲು ಸಾಧ್ಯ ಎಂಬುದನ್ನು ತಾವೇ ಸ್ವತಃ ಅನುಭವಿಸಿ, ನಿರ್ವಹಿಸಿ ಸಮಾಜಕ್ಕೆ ಮಾದರಿಯಾದರು. ಇವರ ಆದರ್ಶ ಜೀವನವನ್ನು ಯುವ ಸಮುದಾಯ ಅನುಸರಿಸಬೇಕೆಂದು ಸಲಹೆ ನೀಡಿದರು.

ಯರವ ಒಕ್ಕೂಟದ ಅಧ್ಯಕ್ಷ ವೈ.ಸಿ. ಶಂಕರ್ ಅಧ್ಯಕ್ಷತೆಯಲ್ಲಿ ರಾಜ ಕಾರೆಕಾಡು, ರಾಮು ದೇವರಪುರ, ಪಿ.ಜೆ. ಸುಬ್ರಮಣ್ಯ, ಪಿ. ಮೋಹನ್, ಸುಬ್ರಮಣ್ಯ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.