ಮಡಿಕೇರಿ, ಡಿ. ೧೦: ನಾಪೋಕ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (ಪ್ರಸ್ತುತ ಕೆವಿಜಿ ಕಟ್ಟಡ ಭಾಗಮಂಡಲ) ಇಲ್ಲಿ ೮ನೇ ತರಗತಿಯಿಂದ ೧೦ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ (ಕರಾಟೆ) ನೀಡಲು ನುರಿತ ಅರ್ಹ ಮಹಿಳಾ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಮಾನ್ಯತೆ ಪಡೆದ ಸ್ವಯಂ ರಕ್ಷಣಾ ಕೌಶಲ್ಯಗಳ ಸಂಸ್ಥೆಗಳಿAದ ತರಬೇತಿ ಪಡೆದ ನುರಿತ ಮತ್ತು ಅರ್ಹ ಮಹಿಳಾ ತರಬೇತುದಾರರು ಅರ್ಜಿ ಸಲ್ಲಿಸಬಹುದು. ಆಸಕ್ತ ಸ್ವಯಂ ರಕ್ಷಣಾ ಕೌಶಲ್ಯ (ಕರಾಟೆ) ತರಬೇತುದಾರರು ಹೆಚ್ಚಿನ ಮಾಹಿತಿಗೆ ದೂ. ೦೮೨೭೨-೨೨೮೯೮೫ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ.