ಕೂಡಿಗೆ, ಡಿ. ೧೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆಯ ಗ್ರಾಮದ ದುಶ್ವಂತ್ ಎಂಬುವರಿಗೆ ಸೇರಿದ ಎಂಟು ತಿಂಗಳ ಕರು ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಕಳೆದ ೨೦ ದಿನಗಳಿಂದ ಈ ಭಾಗದಲ್ಲಿರುವ ಅನೇಕ ರೈತರ ಹಸುಗಳಿಗೆ ಕಾಲುಬಾಯಿ ಜ್ವರ ರೋಗ ಮತ್ತು ಗಂಟುರೋಗ, ಕಾಣಿಸಿಕೊಂಡು ಹಲವು ಹಸುಗಳು ಬಳಲಿ ಸಾವನ್ನಪುತ್ತಿವೆ.
ಪಶುಪಾಲನಾ ಇಲಾಖೆಯ ಪಶುವೈದ್ಯ ಕೊರತೆಯ ನಡುವೆ ಖಾಸಗಿ ವೈದ್ಯರುಗಳಿಂದ ಹಸುಗಳಿಗೆ ಚಿಕಿತ್ಸೆ ನೀಡಿದರೂ ಸಹ ಫಲಕಾರಿಯಾಗದೆ ಈ ಭಾಗದ ಅನೇಕ ಹಸುಗಳು ಕಾಲುಬಾಯಿ ಜ್ವರ ಮತ್ತು ಗಂಟುರೋಗದಿAದ ನರಳುತ್ತಿವೆ. ಹಸುಗಳು ಆಹಾರವನ್ನು ತಿನ್ನದೆ ಬಾಯಿಯಿಂದ ಜೊಲ್ಲು ಸುರಿಸಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಈ ವ್ಯಾಪ್ತಿಯ ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ ಪಶುವೈದ್ಯರು ಇಲ್ಲದೆ ಇರುವುದರಿಂದ ಚಿಕಿತ್ಸೆಗೆ ಬಾರಿ ತೊಂದರೆಗಳು ಆಗುತ್ತಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ರೈತರು ತಿಳಿಸಿದ ಮೇರೆಗೆ ಶಾಸಕರು ಜಿಲ್ಲಾ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಶೀಲನೆ ನಡೆಸಿ ಸಮರ್ಪಕವಾದ ಚಿಕಿತ್ಸೆಯನ್ನು ನೀಡುವಂತೆ ನಿರ್ದೇಶಿಸಿದ್ದಾರೆ.