ಸೋಮವಾರಪೇಟೆ, ಡಿ. ೯: ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್ನ ವಾರ್ಷಿಕ ಮಹಾಸಭೆ ಟ್ರಸ್ಟ್ ಅಧ್ಯಕ್ಷ ಎಂ.ಟಿ. ದಾಮೋದರ್ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ನಾಗರಿಕರ ವೇದಿಕೆಯ ಸಂಚಾಲಕ ಕೆ.ಯು. ಭರತ್ ಮಾತನಾಡಿ, ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಎಸ್.ಪಿ. ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸಿ.ಕೆ. ಮಲ್ಲಪ್ಪ, ಸಹ ಕಾರ್ಯದರ್ಶಿ ಚಂಗಪ್ಪ, ನಿರ್ದೇಶಕರಾದ ಟಿ.ಕೆ. ಮಾಚಯ್ಯ ಮತ್ತಿತರರು ಇದ್ದರು. ಇದೇ ಸಂದರ್ಭ ನೂತನ ಆಡಳಿತ ಮಂಡಳಿ ರಚನೆ ಬಗ್ಗೆ ಚರ್ಚೆ ನಡೆದು ಹಿಂದಿನ ಸಾಲಿನ ಆಡಳಿತ ಮಂಡಳಿಯನ್ನೇ ಮುಂದು ವರೆಸುವಂತೆ ಸಭೆ ತೀರ್ಮಾನಿಸಿತು.