ಮಡಿಕೇರಿ, ಡಿ.೧೦ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಕಚೇರಿ ಆರಂಭವಾಗಿದೆ.

ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಕಲಿಕೆಗೆ ಹಾಗೂ ಉನ್ನತ ಶಿಕ್ಷಣ ಪಡೆಯಲು ಈ ಸದಾವಕಾಶವನ್ನು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಒದಗಿಸಿದೆ.

ಮಡಿಕೇರಿ ಪ್ರಾದೇಶಿಕ ಕೇಂದ್ರವು ಮಡಿಕೇರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಯಾರಂಭ ಮಾಡಿದ್ದು ವಿಶ್ವವಿದ್ಯಾನಿಲಯದ ಬಿಎ, ಬಿಎಸ್‌ಇ, ಬಿಕಾಂ, ಬಿಸಿಎ, ಬಿಬಿಎ, ಎಂಎ, ಎಂಎಸ್ಸಿ, ಎಂಕಾA, ಎಂಬಿಎ ಹಾಗೂ ಡಿಪ್ಲೋಮ ಕೋರ್ಸ್ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ೮೦೭೩೩೪೨೩೧೦, ತಿತಿತಿ.ಞsou.mಥಿsoಡಿe.ಚಿಛಿ.iಟಿ ನ್ನು ಸಂಪರ್ಕಿಸಬಹುದು ಎಂದು ಮುಕ್ತ ವಿವಿ ಪ್ರಕಟಣೆ ತಿಳಿಸಿದೆ.