ವೀರಾಜಪೇಟೆ, ಡಿ. ೧೦: ವೀರಾಜಪೇಟೆ ನಗರದ ಮೀನುಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಆಳವಡಿಸ ಲಾಗಿರುವ ಶವ ಸುಡುವ ತೊಟ್ಟಿ ಶಿಥಿಲಗೊಂಡಿದ್ದು, ಅವಶೇಷಗಳು ಕಳ್ಳರ ಪಾಲಾಗಿದೆ. ನೂತನವಾಗಿ ತೊಟ್ಟಿಯನ್ನು ಅಳವಡಿಸಿಕೊಡುವಂತೆ ಮತ್ತು ಸ್ಮಶಾನವನ್ನು ದುರಸ್ತಿಗೊಳಿ ಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರ ಕುಮಾರ್ ಅವರಿಗೆ ವೀರಾಜಪೇಟೆ ನಗರದ ಮುತ್ತಪ್ಪ ದೇವಸ್ಥಾನ ಆಡಳಿತ ಮಂಡಳಿ, ಓಣಂ ಆಚರಣಾ ಸಮಿತಿ, ಹಿಂದೂ ಮಲಯಾಳಿ ಆಸೋಸಿ ಯೇಷನ್ ಮತ್ತು ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಸದಸ್ಯರು ಮನವಿ ಸಲ್ಲಿಸಿದರು.
ಮನವಿ ನೀಡುವ ಸಂದರ್ಭ ಮಾತನಾಡಿದ ಓಣಂ ಆಚರಣಾ ಸಮಿತಿಯ ಕಾರ್ಯದರ್ಶಿ ಸಿ.ಆರ್. ಬಾಬು ಅವರು ತಾ.೨ರಂದು ನಿಧನರಾದ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಮುತ್ತಪ್ಪ ದೇವಾಲಯದ ಅಧ್ಯಕ್ಷ ಇ.ಸಿ. ಜೀವನ್ ಅವರ ಅಂತಿಮ ಕ್ರಿಯೆ ಮಾಡುವ ಸಂದರ್ಭ ಶರೀರವನ್ನು ಸುಡುವ ತೊಟ್ಟಿಯ ಕೆಳಭಾಗದಲ್ಲಿರುವ ಕಾಸ್ಟಿನ್ ಕಾಣೆಯಾಗಿದೆ. ಶವ ಸುಡಲು ಪ್ರಯಾಸವಾಗಿತ್ತು. ಕಿಡಿಗೇಡಿಗಳು ಹಣದ ಆಸೆಗೆ ಕಬ್ಬಿಣದ ಸಾಮಗ್ರಿಗಳನ್ನು ಕಳುವು ಮಾಡಿದ್ದಾರೆ. ಈ ಹಿಂದೆ ಪಟ್ಟಣ ಪಂಚಾಯಿತಿಯ ವಿಶೇಷ ಅನುದಾನದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಲಾಗಿತ್ತು. ಶವ ಸುಡುವ ತೊಟ್ಟಿ ಶಿಥಿಲಗೊಂಡು ಶವ ಸುಡಲು ಯೋಗ್ಯವಲ್ಲವಾಗಿದೆ. ಪಟ್ಟಣ ಪಂಚಾಯಿತಿ ಶೀಘ್ರವಾಗಿ ತೊಟ್ಟಿಯನ್ನು ದುರಸ್ತಿ ಮಾಡಬೇಕು. ಅಲ್ಲದೆ ಕಬ್ಬಿಣ ತೊಟ್ಟಿಯ ಅವಶೇಷಗಳನ್ನು ಕಳವು ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುತ್ತಪ್ಪ ದೇವಾಲಯ ಆಡಳಿತ ಮಂಡಳಿಯ ಸದಸ್ಯ ಸಿ.ಆರ್. ಸಜೀವನ್ ಅವರು ಮಾತನಾಡಿ, ಈ ಹಿಂದೆ ರುದ್ರಭೂಮಿಯ ನಿರ್ವಹಣೆಯನ್ನು ದೇವಾಲಯದ ಮಂಡಳಿಯ ಸದಸ್ಯರು ಮಾಡುತ್ತಿದ್ದರು. ಇದೀಗ ರುದ್ರಭೂಮಿಯ ಸಂಪೂರ್ಣ ಹೊಣೆಯನ್ನು ಪಟ್ಟಣ ಪಂಚಾಯಿತಿ ನಿರ್ವಹಿಸುತ್ತಿದೆ. ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದAತೆ ಹರಿಶ್ಚಂದ್ರ ಕಲ್ಲಿಗೆ ಪೂಜೆ ಸಲ್ಲಿಸುವುದಾಗಿದೆ. ಮಳೆಗಾಲದ ವೇಳೆಯಲ್ಲಿ ಪೂಜೆ ಸಲ್ಲಿಸಲು ಕಷ್ಟಸಾಧÀ್ಯವಾಗಿದೆ.
ಪೂಜೆ ಮಾಡುವ ಸ್ಥಳಕ್ಕೆ ಪಂಚಾಯಿತಿ ವತಿಯಿಂದ ಮೇಲ್ಚಾವಣಿಯನ್ನು ಅಳವಡಿಸಿದಲ್ಲಿ ಉಪಯುಕ್ತವಾಗುತ್ತದೆ. ರುದ್ರಭೂಮಿಯಲ್ಲಿ ಅಂತಿಮ ಕ್ರಿಯೆ, ವಿಧಿವಿಧಾನಗಳನ್ನು ನೆರವೇರಿಸಲು ಪರಿಕರಗಳನ್ನು ಇಡುವ ಕೋಣೆಯನ್ನು ನಿರ್ಮಾಣ ಮಾಡಬೇಕಿದೆ. ಎರಡು ತಿಂಗಳಿಗೆ ಒಂದು ಬಾರಿಯಾದರು ಸ್ವಚ್ಛಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಬೇಕು ಎಂದು ಹೇಳಿದರು.
ಮನವಿ ಸಲ್ಲಿಸುವ ವೇಳೆಯಲ್ಲಿ ಹಿಂದೂ ಮಲಯಾಳಿ ಅಸೋಸಿ ಯೇಷನ್‌ನ ಅಧ್ಯಕ್ಷ ವಿನೂಬ್ ಹಾಗೂ ಸದಸ್ಯರು, ಎಸ್.ಎನ್.ಡಿ.ಪಿ. ಶಾಖೆಯ ಕಾರ್ಯದರ್ಶಿಗಳಾದ ಪದ್ಮನಾಭ ಮತ್ತು ಸದಸ್ಯರು, ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಓಣಂ ಆಚರಣಾ ಸಮಿತಿಯ ಸದಸ್ಯರು, ವಿವಿಧ ಪಕ್ಷದ ಮುಖಂಡರುಗಳು ಮತ್ತು ಸಾರ್ವಜನಿಕರು ಹಾಜರಿದ್ದರು.