ಮಡಿಕೇರಿ, ಡಿ. ೧೦: ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ನಡೆದ ಚುನಾವಣೆ ಇಂದು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಎಂ.ಪಿ. ಸುಜಾಕುಶಾಲಪ್ಪ ಹಾಗೂ ಡಾ. ಮಂತರ್‌ಗೌಡ ಅವರುಗಳ ನಡುವಿನ ನೇರ ಸ್ಪರ್ಧೆಯ ಚುನಾವಣೆ ಇದಾಗಿದ್ದು, ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಎರಡು ಪಕ್ಷಗಳ ಜಿದ್ದಾಜಿದ್ದಿನ ಚುನಾವಣೆಗೆ ನಡೆದಿರುವ ಮತ ಸಮರಕ್ಕೆ ಇಂದು ತೆರೆ ಬಿದ್ದಿದ್ದು, ಇದೀಗ ಎಲ್ಲರ ಚಿತ್ತ ಫಲಿತಾಂಶದತ್ತ ಕೇಂದ್ರೀಕೃತವಾಗಿದೆ.

ಜಿಲ್ಲೆಯಲ್ಲಿನ ಒಟ್ಟು ೧೩೨೯ ಮತದಾರರ ಪೈಕಿ ೧೩೨೫ ಮಂದಿ ಮತ ಚಲಾಯಿಸಿದ್ದು, ಶೇ. ೯೯.೭೦ ರಷ್ಟು ಮತದಾನವಾಗಿದೆ. ೧೩೨೯ರಲ್ಲಿ ಇಬ್ಬರು ಮತದಾರರು ಮತದಾರರ ಪಟ್ಟಿ ತಯಾರಾದ ಬಳಿಕ ಸಾವನ್ನಪ್ಪಿದ್ದು, ಇನ್ನಿಬ್ಬರು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಸಿದ್ದಾಪುರ ಗ್ರಾ.ಪಂ.ನಲ್ಲಿ ಒಂದಷ್ಟು ಗೊಂದಲ ಹೊರತುಪಡಿಸಿದಂತೆ ಇತರೆಡೆಗಳಲ್ಲಿ ಪ್ರಕ್ರಿಯೆ ಶಾಂತಿಯುತವಾಗಿತ್ತು. ಜಿಲ್ಲೆಯಲ್ಲಿ ಒಟ್ಟು ೧೦೮ ಮತಗಟ್ಟೆಗಳಲ್ಲಿ ಇಂದು ಬೆಳಿಗ್ಗೆ ೮ ರಿಂದ ಮತದಾನ ಪ್ರಕ್ರಿಯೆ ಸಕಲ ಮುಂಜಾಗ್ರತಾ ಕ್ರಮಗಳ ಮೂಲಕ ಆರಂಭಗೊAಡಿದ್ದು, ಸಂಜೆ ೪ ಗಂಟೆಗೆ ಮುಕ್ತಾಯಗೊಂಡಿತು.

ಸAಸದರು, ಮಡಿಕೇರಿ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿದಂತೆ ಮಡಿಕೇರಿ ನಗರಸಭೆಯ ಸದಸ್ಯರುಗಳು ಜಿಲ್ಲಾ ಕೇಂದ್ರವಾದ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಉಳಿದಂತೆ ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ ಪ.ಪಂ. ಸದಸ್ಯರು ಅಲ್ಲಲ್ಲಿನ ಮತಗಟ್ಟೆ ಹಾಗೂ ಗ್ರಾ.ಪಂ. ಸದಸ್ಯರುಗಳು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ತೆರೆಯಲಾಗಿದ್ದ ಮತಗಟ್ಟೆಗಳಲ್ಲಿ ಮತ ಚಲಾವಣೆ ಮಾಡಿದರು.

ಪೂಜೆ ಬಳಿಕ ಮತಚಲಾಯಿಸಿದ ಬಿಜೆಪಿ ಪ್ರಮುಖರು

ಮಡಿಕೇರಿಯ ಶ್ರೀಕೋಟೆ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಿಜೆಪಿ ಪ್ರಮುಖರು ಬಳಿಕ ಕಾವೇರಿ ಕಲಾಕ್ಷೇತ್ರದ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದರು. ಶಾಸಕ ಅಪ್ಪಚ್ಚುರಂಜನ್, ಹಾಲಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ಸೇರಿದಂತೆ ನಗರ ಬಿಜೆಪಿ ಪ್ರಮುಖರು ಪೂಜೆಯಲ್ಲಿ ಭಾಗಿಗಳಾಗಿದ್ದರು. ಬಳಿಕ ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಇತರ ಪ್ರಮುಖರು ಮತ ಚಲಾಯಿಸಿದರು. ಶಾಸಕ ಕೆ.ಜಿ. ಬೋಪಯ್ಯ ಅವರು ವೀರಾಜಪೇಟೆ ಪ.ಪಂ. ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕಾಂಗ್ರೆಸ್‌ನಿAದ

ಕಾAಗ್ರೆಸ್ ಪಕ್ಷದ ಎಂಎಲ್‌ಸಿಯಾಗಿರುವ ವೀಣಾ ಅಚ್ಚಯ್ಯ ಅವರು ಕಾವೇರಿ ಕಲಾಕ್ಷೇತ್ರ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

(ಮೊದಲ ಪುಟದಿಂದ) ಅಧ್ಯಕ್ಷರ ಕೊಠಡಿಯಲ್ಲಿದ್ದ ಮತದಾನ ಮಾಡಿದ ಸದಸ್ಯರನ್ನು ಕೂಡ ಮತಗಟ್ಟೆಯಿಂದ ಹೊರಕ್ಕೆ ಕಳುಹಿಸಿದರು. ಬಳಿಕ ಉಳಿದ ಸದಸ್ಯರು ಮತದಾನ ಮಾಡಿದರು.ಸಿದ್ದಾಪುರದಲ್ಲಿ ಮೊಬೈಲ್ ಗೊಂದಲ

(ಮೊದಲ ಪುಟದಿಂದ) ರೆಸಾರ್ಟ್ ವಾಸ್ತವ್ಯಕ್ಕೆ ತರಾಟೆ: ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ರೆಸಾರ್ಟ್ ವಾಸ್ತವ್ಯ ಹೂಡಿದ್ದು, ಕಳೆದ ನಾಲ್ಕು ದಿನಗಳಿಂದ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಚೆನ್ನಯ್ಯನಕೋಟೆ, ಮಾಲ್ದಾರೆ, ನೆಲ್ಲಿಹುದಿಕೇರಿ ಗ್ರಾ.ಪಂ.ನಲ್ಲಿ ಶಾಂತಿಯುತ ಮತದಾನ ನಡೆಯಿತು. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸಿದ್ದಾಪುರ ಮತದಾನ ಕೇಂದ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿ ಸುಜಾ ಕುಶಾಲಪ್ಪ, ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ, ಕಾರ್ಯಕರ್ತರಿಂದ ಮಾಹಿತಿ ಪಡೆದರು.ದಕ್ಷಿಣ ಕೊಡಗಿನಲ್ಲಿ ಬಿರುಸಿನ ಮತದಾನ

ದಕ್ಷಿಣ ಕೊಡಗಿನ ಗ್ರಾಮ ಪಂಚಾಯಿತಿಯಲ್ಲಿ ಮುಂಜಾನೆಯಿAದಲೇ ಬಿರುಸಿನ ಮತದಾನ ನಡೆಯಿತು. ಬೆಳಿಗ್ಗೆ ೧೦.೩೦ ಸುಮಾರಿಗೆ ನಿಗದಿತ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಸದಸ್ಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಯಾವುದೇ ಮತದಾನ ಕೇಂದ್ರದಲ್ಲಿ ಸಮಸ್ಯೆ ಕಂಡುಬರಲಿಲ್ಲ. ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ತಮ್ಮ ಪಕ್ಷದ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮತದಾನದ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಿಮಾಡ ಶರೀನ್ ಮುತ್ತಣ್ಣ ಅವರ ಹೋಮ್ ಸ್ಟೇನಲ್ಲಿ ಕಳೆದ ರಾತ್ರಿ ಕೆಲವು ಪಂಚಾಯಿತಿ ಸದಸ್ಯರು ತಂಗಿದ್ದಾರೆ ಎಂಬ ದೂರಿನ ಮೇರೆ ಮಧ್ಯರಾತ್ರಿಯ ವೇಳೆ ಗೋಣಿಕೊಪ್ಪ ವೃತ್ತ ನಿರೀಕ್ಷಕರು ಹಾಗೂ ಚುನಾವಣಾ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೋಮ್ ಸ್ಟೇಯಲ್ಲಿ ಹೊರ ಜಿಲ್ಲೆಯ ಅತಿಥಿಗಳು ಮಾತ್ರ ತಂಗಿರುವುದನ್ನು ಮನಗಂಡ ಅಧಿಕಾರಿಗಳು ವಾಪಸ್ಸಾದರು.

ಗೋಣಿಕೊಪ್ಪಲು: ಗ್ರಾಮೀಣ ಭಾಗವಾದ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ. ಸದಸ್ಯರುಗಳು ಒಟ್ಟಾಗಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಸ್ಥಳೀಯ ಕಾಲ ಭೈರವೇಶ್ವರ ದೇವಾಲಯದಲ್ಲಿ ಬಿಜೆಪಿ ಪಕ್ಷದ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಸುರೇಶ್ ಮುಂದಾಳತ್ವದಲ್ಲಿ ಪಕ್ಷದ ಹಿರಿಯ ಮುಖಂಡರು, ಪಂಚಾಯಿತಿ ಸದಸ್ಯರು ಪೂಜೆ ಸಲ್ಲಿಸಿದ ತರುವಾಯ ನೇರವಾಗಿ ಪಂಚಾಯಿತಿಗೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಈ ವೇಳೆ ಬಿಜೆಪಿ ಪಕ್ಷದ ರಾಜ್ಯ ಕೃಷಿ ಮೋರ್ಚಾ ಸದಸ್ಯರಾದ ಮಾಪಂಗಡ ಯಮುನಾ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಲ್ಲಮಾಡ ಪ್ರಭು, ಮಾಪಂಗಡ ಸುಜಾ ಪೂಣಚ್ಚ, ಮುಕ್ಕಾಟೀರ ಸೋಮಯ್ಯ, ಮೋಹನ್ ಚಂಗಪ್ಪ, ಕೊಟ್ಟಂಗಡ ಮಧು, ಮಾಪಂಗಡ ವಿಕಾಶ್, ಕಿಶ ಮಾಚಯ್ಯ , ಚೆಕ್ಕೇರ ಸೂರ್ಯ ಅಯ್ಯಪ್ಪ ಮುಂತಾದವರು ಹಾಜರಿದ್ದರು.

ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿಯ ಒಟ್ಟು ೧೦ ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ ೯ ಗ್ರಾ.ಪಂ. ಸದಸ್ಯರು ಬೆಳಿಗ್ಗೆ ೮.೩೦ಕ್ಕೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯ ೯ ಗಂಟೆಗೆ ಮತ ಚಲಾಯಿಸುವ ಮೂಲಕ ಕಿರುಗೂರು ಪಂಚಾಯಿತಿಯ ಶೇ. ೧೦೦ ರಷ್ಟು ಮತದಾನ ಕಾರ್ಯ ಪೂರ್ಣಗೊಂಡಿತು.ಸೋಮವಾರಪೇಟೆ: ರಾಜ್ಯ ವಿಧಾನ ಪರಿಷತ್‌ಗೆ ಇಂದು ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ ತಾಲೂಕಿನ ೨೪ ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಶೇ. ೯೯ ರಷ್ಟು ಸಾಧನೆಯಾಗಿದೆ. ತಾಲೂಕಿನ ಈರ್ವರು ಗ್ರಾಮ ಪಂಚಾಯಿತಿ ಸದಸ್ಯರು ಗೈರಾಗಿದ್ದು, ಉಳಿದಂತೆ ೨೬೪ ಮಂದಿ ತಮ್ಮ ಮತ ಚಲಾಯಿಸಿದ್ದಾರೆ.

ಬೆಳಿಗ್ಗೆ ೮ ಗಂಟೆಯಿAದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ೧೦ ಗಂಟೆಯ ವೇಳೆಗಾಗಲೇ ಶೇ. ೫೦ ರಷ್ಟು ಮತದಾನವಾಗಿತ್ತು. ಪಕ್ಷ ಬೆಂಬಲಿತ ಸದಸ್ಯರು ತಂಡವಾಗಿ ಆಗಮಿಸಿ ಮತದಾನದಲ್ಲಿ ಭಾಗವಹಿಸಿದರು. ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಗೊಂದಲರಹಿತ ಹಾಗೂ ಶಾಂತಿಯುತವಾಗಿ ಮತದಾನ ನಡೆಯಿತು.

ಪ್ರತಿ ಮತಗಟ್ಟೆಗೆ ಓರ್ವ ಪ್ರೊಸಿಡಿಂಗ್ ಆಫೀಸರ್, ಓರ್ವ ಮತಗಟ್ಟೆ ಅಧಿಕಾರಿ, ಒಬ್ಬರು ಮೈಕ್ರೋ ಅಬ್ಸರ್ವರ್, ಗುರುತು ಪತ್ತೆಗೆ ಸ್ಥಳೀಯ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ತಾಲೂಕು ಚುನಾವಣಾ ಸೂಪರ್‌ವೈಸರ್ ಆಗಿದ್ದ ತಹಶೀಲ್ದಾರ್ ಗೋವಿಂದರಾಜು ಅವರು ಚೌಡ್ಲು, ಬಳಗುಂದ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿದಂತೆ ಇತರ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಮಧ್ಯಾಹ್ನದ ವೇಳೆಗೆ ತಾಲೂಕಿನ ೧೮ ಪಂಚಾಯಿತಿಗಳಲ್ಲಿ ಶೇ. ೧೦೦ ರಷ್ಟು ಮತದಾನವಾಗಿತ್ತು. ಉಳಿದ ೪ ಪಂಚಾಯಿತಿಗಳಲ್ಲಿ ಸಂಜೆ ೩ ರ ವೇಳೆಗೆ ಶೇ. ೧೦೦ ಮತದಾನವಾಯಿತು. ತಾಲೂಕಿನ ನಿಡ್ತ ಹಾಗೂ ಹರದೂರು ಗ್ರಾಮ ಪಂಚಾಯಿತಿಯ ತಲಾ ಓರ್ವ ಸದಸ್ಯರು ಮತದಾನದಲ್ಲಿ ಗೈರಾಗಿದ್ದರಿಂದ ಅಂತಿಮವಾಗಿ ಶೇ. ೯೮.೨೪ ರಷ್ಟು ಮತದಾನ ಆದಂತಾಯಿತು.

ತಾಲೂಕಿನ ೧೩೮ ಮಹಿಳಾ ಮತದಾರರ ಪೈಕಿ ಎಲ್ಲರೂ ಮತ ಚಲಾಯಿಸುವ ಮೂಲಕ ಶೇ. ೧೦೦ ರಷ್ಟು ದಾಖಲೆಯ ಮತದಾನವಾಯಿತು. ೧೨೮ ಪುರುಷ ಮತದಾರರ ಪೈಕಿ ಈರ್ವರು ಗೈರಾಗಿದ್ದು, ೧೨೬ ಮಂದಿ ಮತ ಚಲಾಯಿಸಿದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಬೆಳಿಗ್ಗೆ ೯ ಗಂಟೆಗೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದರು. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಒಂದು ತಂಡವಾಗಿ ಆಗಮಿಸಿ ಮತದಾನದಲ್ಲಿ ಭಾಗಿಯಾದರು. ತಾಲೂಕಿನ ಯಾವ ಮತಗಟ್ಟೆಯಲ್ಲೂ ಪಕ್ಷದ ಕಾರ್ಯಕರ್ತರ ಭರ್ಜರಿ ಪ್ರಚಾರ ಕಂಡುಬರಲಿಲ್ಲ. ಸದಸ್ಯರು ತಂಡವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದರೂ ಒಬ್ಬೊಬ್ಬರಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಅವರು ಇಂದು ಬೆಳಿಗ್ಗೆ ಪಟ್ಟಣದ ಆಂಜನೇಯ ದೇವಾಲಯ, ಹಾನಗಲ್ಲು ಗ್ರಾಮದ ಗಣಪತಿ ದೇವಾಲಯಕ್ಕೆ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬೆಳಿಗ್ಗೆಯೇ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ತಮ್ಮ ಪಕ್ಷ ಬೆಂಬಲಿತ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಎಲ್ಲರೂ ಮತದಾನದಲ್ಲಿ ಭಾಗಿಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಂಡರು. ವಿಭಜಿತ ಸೋಮವಾರಪೇಟೆ ತಾಲೂಕಿಗೆ ೨೩ ಗ್ರಾಮ ಪಂಚಾಯಿತಿಗಳು ಹಾಗೂ ಒಂದು ಪಟ್ಟಣ ಪಂಚಾಯಿತಿ ಒಳಪಟ್ಟಿದ್ದು, ಒಟ್ಟು ೨೬೬ ಮತದಾರರ ಪೈಕಿ ಈರ್ವರು ಗೈರಾಗಿ ೨೬೪ ಮಂದಿ ಮತದಾನ ಮಾಡಿದರು. ಎಲ್ಲಾ ಮತಗಟ್ಟೆಗಳಲ್ಲೂ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಆಗಾಗ್ಗೆ ಗಸ್ತು ನಡೆಸುತ್ತಿದ್ದರು. ಇದರೊಂದಿಗೆ ಮತಗಟ್ಟೆಗಳಿಗೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು.

ಮೊಕದ್ದಮೆ-ಕಾರಾಗೃಹವಾಸದಿಂದ ತಪ್ಪಿದ ಮತದಾನದ ಅವಕಾಶ

ತಾಲೂಕಿನ ನಿಡ್ತ ಗ್ರಾ.ಪಂ. ವ್ಯಾಪ್ತಿಯ ಗೋಪಾಲಪುರದ ಓರ್ವ ಸದಸ್ಯ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಶಿಕ್ಷೆಗೆ ಒಳಗಾಗಿ ಮೈಸೂರಿನ ಕಾರಾಗೃಹವಾಸದಲ್ಲಿರುವುದರಿಂದ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

೨೦೦೩ರಲ್ಲಿ ಶನಿವಾರಸಂತೆ ಪಟ್ಟಣದಲ್ಲಿ ಬಾಗದಾಳು ಗ್ರಾಮದ ಕಾಂತ ಎಂಬವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ನಿಡ್ತ ಗ್ರಾ.ಪಂ. ಸದಸ್ಯ ಹರೀಶ್ ಎಂಬಾತನ ಮೇಲೆ ಮೊಕದ್ದಮೆ ದಾಖಲಾಗಿತ್ತು. ಇದರ ವಿಚಾರಣೆ ನಡೆದು ೨೦೦೮ರಲ್ಲಿ ಜಿಲ್ಲಾ ನ್ಯಾಯಾಲಯ ೩ ವರ್ಷ ಜೈಲುವಾಸ ಹಾಗೂ ೧೫ ಸಾವಿರ ದಂಡ ವಿಧಿಸಿತ್ತು.

ಈ ಆದೇಶದ ಕೆಲವೊಂದು ವಿಚಾರಗಳಿಗೆ ಸಂಬAಧಿಸಿದAತೆ ಹರೀಶ್, ಹೈಕೋರ್ಟ್ ಮೊರೆ ಹೋಗಿದ್ದ. ಇಲ್ಲಿ ವಿಚಾರಣೆ ನಡೆದು ೨೦೨೧ರ ಜನವರಿ ೨೧ ರಂದು ಹೈಕೋರ್ಟ್ ತೀರ್ಪು ನೀಡಿದ್ದು, ೨ ವರ್ಷ ಕಾರಾಗೃಹವಾಸ ಹಾಗೂ ೧.೫೦ಲಕ್ಷ ದಂಡ ವಿಧಿಸಿತ್ತು. ಈ ಹಿನ್ನೆಲೆ ಪೊಲೀಸರು ಹರೀಶನನ್ನು ಬಂಧಿಸಿ ಕಾರಾಗೃಹವಾಸಕ್ಕೆ ಒಪ್ಪಿಸಿದ್ದರು.

ಅಂತೆಯೇ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಕಳೆದ ೨ ತಿಂಗಳ ಹಿಂದೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಮುಸ್ತಾಫ ಎಂಬಾತ ಇಂದಿಗೂ ತಲೆಮರೆಸಿಕೊಂಡಿರುವ ಹಿನ್ನೆಲೆ ಮತದಾನದಲ್ಲಿ ಭಾಗಿಯಾಗಿಲ್ಲ.

ಮಲ್ಲಿಕಾರ್ಜುನ ಕಾಲೋನಿಗೆ ಅಳವಡಿಸಿರುವ ಪ್ರವೇಶ ದ್ವಾರದ ಬಗ್ಗೆ ತಗಾದೆ ತೆಗೆದು, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಮುಸ್ತಾಫ ಮೇಲೆ ಹಲ್ಲೆ, ದಲಿತ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದ್ದು, ತಲೆಮರೆಸಿಕೊಂಡಿರುವುದರಿAದ ಮತದಾನದಲ್ಲಿ ಭಾಗವಹಿಸಿಲ್ಲ. ಹೀಗಾಗಿ ತಾಲೂಕಿನ ಈರ್ವರು ಸದಸ್ಯರು ಮತದಾನದ ಅವಕಾಶದಿಂದ ವಂಚಿತರಾದರು.

*ಗೋಣಿಕೊಪ್ಪ: ಬೆಳಿಗ್ಗೆ ೧೦ ಗಂಟೆಯೊಳಗೆ ತಿತಿಮತಿ, ಗೋಣಿಕೊಪ್ಪ, ಅರುವತ್ತೊಕ್ಲು, ಪೊನ್ನಂಪೇಟೆ, ಮಾಯಮುಡಿ ಭಾಗಗಳಲ್ಲಿ ಹಾಗೂ ಇತರ ಪಂಚಾಯಿತಿಗಳಲ್ಲಿ ಮಧ್ಯಾಹ್ನ ೩ ಗಂಟೆಯೊಳಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.

ಶಾಸಕ ಕೆ.ಜಿ. ಬೋಪಯ್ಯ ಅವರು ಪೊನ್ನಂಪೇಟೆ ತಾಲೂಕಿನ ತಿತಿಮತಿ, ದೇವರಪುರ, ಪೊನ್ನಪ್ಪಸಂತೆ, ಬಾಳೆಲೆ, ಕಾನೂರು, ಬಲ್ಯಮಂಡೂರು, ಪೊನ್ನಂಪೇಟೆ ಪಂಚಾಯಿತಿಯಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣೆ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ಮತದಾನ ಕೇಂದ್ರದಲ್ಲಿ ಶೇ. ನೂರರಷ್ಟು ಮತದಾನ ನಡೆಯಿತು. ಪಟ್ಟಣ ಪಂಚಾಯಿತಿಯ ಒಟ್ಟು ೧೯ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು. ಬಿಜೆಪಿ ಬೆಂಬಲಿತ ೯ ಸದಸ್ಯರು ಕುಶಾಲನಗರ ಗಣಪತಿ ದೇವಾಲಯದಲ್ಲಿ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದರು.

ಬೆಳಗ್ಗೆ ೧೦.೩೦ ತನಕ ಯಾವ ಮತದಾರರೂ ಮತದಾನ ಕೇಂದ್ರದತ್ತ ಸುಳಿಯದೆ ತಮ್ಮದೇ ಆದ ಕಾರ್ಯತಂತ್ರ ರೂಪಿಸುವಲ್ಲಿ ತಲ್ಲೀನರಾದಂತೆ ಕಂಡುಬAತು. ಕೆಲವೇ ಅವಧಿಯ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಮಂತರ್ ಗೌಡ ಅವರ ನೇತೃತ್ವದಲ್ಲಿ ಬಂದ ಏಳು ಮಂದಿ ಪಟ್ಟಣ ಪಂಚಾಯಿತಿ ಸದಸ್ಯರು ಗಣಪತಿ ದೇವಾಲಯ ಎದುರುಗಡೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ನಂತರ ಮತದಾನಕ್ಕೆ ತೆರಳಿದ ದೃಶ್ಯ ಕಂಡುಬAತು.

ಇನ್ನುಳಿದ ಮೂರು ಮಂದಿ ಜೆಡಿಎಸ್ ಜನಪ್ರತಿನಿಧಿಗಳು ಪ್ರತ್ಯೇಕವಾಗಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಬಿಜೆಪಿ ಸದಸ್ಯರೊಬ್ಬರು ತಮ್ಮ ಗುರುತಿನ ಚೀಟಿ ತರದ ಹಿನ್ನೆಲೆಯಲ್ಲಿ ಮತದಾನ ಮಾಡಲು ಅವಕಾಶ ದೊರಕದೆ ನಂತರ ಮನೆಗೆ ತೆರಳಿ ಗುರುತಿನ ಚೀಟಿ ತಂದು ತಮ್ಮ ಹಕ್ಕನ್ನು ಚಲಾಯಿಸ ಬೇಕಾಯಿತು.

ಪಾಲಿಬೆಟ್ಟ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಮತಕೇಂದ್ರದಲ್ಲಿ ಸದಸ್ಯರುಗಳು ಮತ ಚಲಾಯಿಸಿದರು. ನಾಪೋಕ್ಲು

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ನಾಪೋಕ್ಲು, ಎಮ್ಮೆಮಾಡು, ಬಲ್ಲಮಾವಟಿ, ಕುಂಜಿಲ-ಕಕ್ಕಬ್ಬೆ, ನರಿಯಂದಡ, ಕೊಣಂಜಗೇರಿ, ಪಂಚಾಯಿತಿಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ. ೧೦೦ ಮತದಾನವಾಗಿರುವ ಬಗ್ಗೆ ತಿಳಿದು ಬಂದಿದೆ. ಮತದಾನ ಶಾಂತಿಯುತವಾಗಿ ನಡೆದಿದ್ದು, ಮತದಾನ ಮಧ್ಯಾಹ್ನ ೧೨ ಗಂಟೆಗೆ ಪೂರ್ಣಗೊಂಡಿತು.

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ಮತದಾನ ಕೇಂದ್ರದಲ್ಲಿ ಶೇ. ನೂರರಷ್ಟು ಮತದಾನ ನಡೆಯಿತು. ಪಟ್ಟಣ ಪಂಚಾಯಿತಿಯ ಒಟ್ಟು ೧೯ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು. ಬಿಜೆಪಿ ಬೆಂಬಲಿತ ೯ ಸದಸ್ಯರು ಕುಶಾಲನಗರ ಗಣಪತಿ ದೇವಾಲಯದಲ್ಲಿ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದರು.

ಬೆಳಗ್ಗೆ ೧೦.೩೦ ತನಕ ಯಾವ ಮತದಾರರೂ ಮತದಾನ ಕೇಂದ್ರದತ್ತ ಸುಳಿಯದೆ ತಮ್ಮದೇ ಆದ ಕಾರ್ಯತಂತ್ರ ರೂಪಿಸುವಲ್ಲಿ ತಲ್ಲೀನರಾದಂತೆ ಕಂಡುಬAತು. ಕೆಲವೇ ಅವಧಿಯ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಮಂತರ್ ಗೌಡ ಅವರ ನೇತೃತ್ವದಲ್ಲಿ ಬಂದ ಏಳು ಮಂದಿ ಪಟ್ಟಣ ಪಂಚಾಯಿತಿ ಸದಸ್ಯರು ಗಣಪತಿ ದೇವಾಲಯ ಎದುರುಗಡೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ನಂತರ ಮತದಾನಕ್ಕೆ ತೆರಳಿದ ದೃಶ್ಯ ಕಂಡುಬAತು.

ಇನ್ನುಳಿದ ಮೂರು ಮಂದಿ ಜೆಡಿಎಸ್ ಜನಪ್ರತಿನಿಧಿಗಳು ಪ್ರತ್ಯೇಕವಾಗಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಬಿಜೆಪಿ ಸದಸ್ಯರೊಬ್ಬರು ತಮ್ಮ ಗುರುತಿನ ಚೀಟಿ ತರದ ಹಿನ್ನೆಲೆಯಲ್ಲಿ ಮತದಾನ ಮಾಡಲು ಅವಕಾಶ ದೊರಕದೆ ನಂತರ ಮನೆಗೆ ತೆರಳಿ ಗುರುತಿನ ಚೀಟಿ ತಂದು ತಮ್ಮ ಹಕ್ಕನ್ನು ಚಲಾಯಿಸ ಬೇಕಾಯಿತು.

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ೪ ಮಂದಿ ಸದಸ್ಯರುಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳಿಬ್ಬರು ಮತಯಾಚಿಸಲಿಲ್ಲ ಎಂದು ಮತದಾನ ಮಾಡದಂತೆ ತೀರ್ಮಾನಿಸಿದ್ದು, ಕೊನೆಯ ಹಂತದಲ್ಲಿ ಅಭ್ಯರ್ಥಿಗಳು ದೂರವಾಣಿ ಕರೆಮಾಡಿದ ಮೇರೆಗೆ ಸಂಜೆ ಮತದಾನ ಮಾಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಆಲಿಕುಟ್ಟಿ, ಪ್ರಸಾದ್‌ಕುಟ್ಟಪ್ಪ, ಶಬ್ಬೀರ್, ವನಿತಾ ಅವರುಗಳು ಮತದಾನ ಮಾಡದಂತೆ ನಿರ್ಧರಿಸಿದರು.

ವಿಷಯ ತಿಳಿದ ಪಕ್ಷವೊಂದರ ಜಿಲ್ಲಾಮಟ್ಟದ ಮುಖಂಡರುಗಳು ೪ ಮಂದಿ ಮತದಾರರನ್ನು ಭೇಟಿಯಾಗಿ ಮತದಾನದಲ್ಲಿ ಭಾಗವಹಿಸಲು ಮನವೊಲಿಸಲು ಪ್ರಯತ್ನಿಸಿದರು. ಪಟ್ಟು ಬಿಡದ ಸದಸ್ಯರುಗಳು ನಮ್ಮ ಬಳಿ ಆಭ್ಯರ್ಥಿಗಳು ಮತ ಕೇಳಲಿಲ್ಲ. ಪಕ್ಷದ ಮುಖಂಡರುಗಳು ಸಹ ನಮ್ಮನ್ನು ಕಡೆಗಣಿಸಿದ್ದಾರೆ. ಅದರಿಂದ ಮತದಾನ ಮಾಡದಂತೆ ನಿರ್ಧರಿಸಿದ್ದೇವೆ ಎಂದು ಹೇಳಿದರು. ಆಗ ಚುರುಕುಗೊಂಡ ಪಕ್ಷದ ನಾಯಕರು ಅಭ್ಯರ್ಥಿಗೆ ದೂರವಾಣಿ ಕರೆ ಮಾಡಿ ಅವರಲ್ಲಿ ನೀವೇ ಮನವಿ ಮಾಡುವಂತೆ ತಿಳಿಸಿದ ಮೇರೆಗೆ ಆಭ್ಯರ್ಥಿಗಳು ೪ ಮಂದಿಗೆ ಮತದಾನ ಮಾಡುವಂತೆ ಕೇಳಿಕೊಡಿದ್ದಾರೆ ನಂತರ ಅಪರಾಹ್ನ ೩.೩೦ ಕ್ಕೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದರು. (ಏಳನೇ ಪುಟಕ್ಕೆ)ಚೆಂವೀರಾಜಪೇಟೆ: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಬೋಪಯ್ಯ ಸೇರಿ ಒಟ್ಟು ೨೧ ಮತಗಳು ಚಲಾವಣೆಗೊಂಡವು.

ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ೧೨ ಸದಸ್ಯರÀ ಪೈಕಿ ೧೦ ಬಿಜೆಪಿ ಸದಸ್ಯರು ಪಟ್ಟಣದ ಗಣಪತಿ ಗುಡಿಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲುವಂತೆ ಪೂಜೆ ಸಲ್ಲಿಸಿ ನಂತರ ಮತ ಚಲಾಯಿಸಿದರು. ವೀರಾಜಪೇಟೆ ತಾಲೂಕಿನಲ್ಲಿ ೧೬, ಪೊನ್ನಂಪೇಟೆ ತಾಲೂಕಿನಲ್ಲಿ ೧೮ ಸೇರಿ ಒಟ್ಟು ೩೬ ಪಂಚಾಯಿತಿಗಳಲ್ಲಿ ೪೩೮ ಸದಸ್ಯರು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ ಎಂದು ತಹಶೀಲ್ದಾರ್ ಡಾ. ಯೋಗಾನಂದ್ ತಿಳಿಸಿದ್ದಾರೆ.

iÀÄ್ಯಂಡಾಣೆ: ಸ್ಥಳೀಯ ಬಿಜೆಪಿ ವತಿಯಿಂದ ನರಿಯಂದಡ ಭಗವತಿ ದೇವಸ್ಥಾನದಲ್ಲಿ ಅರ್ಚಕರಾದ ಶಿವ ಶರ್ಮ, ಹಿರಿಯರಾದ ಮಕ್ಕಿಮನೆ ಶಿವರಾಮ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಿ ಸುಜಾ ಕುಶಾಲಪ್ಪ ಗೆಲುವಿಗಾಗಿ ಪ್ರಾರ್ಥಿಸಲಾಯಿತು.

ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪೊಕ್ಕುಳಂಡ್ರ ದನೋಜ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರತೀಶ್ ಕುಮಾರ್, ಐತಿಚಂಡ ಭೀಮಯ್ಯ, ಮುಂಡಿಯೋಳAಡ ಈರಪ್ಪ, ದಿನು ಗಣಪತಿ, ವಿಲೀನ್, ರಾಜು, ಗಿರೀಶ್ ಕೋಲೆಯಂಡ, ಮಂಜುಳಾ, ಕೌಸಿ ಕಾವೇರಮ್ಮ, ಪುಷ್ಪ, ನೇತ್ರಾವತಿ ಹಾಜರಿದ್ದರು.

ಚೆಯ್ಯಂಡಾಣೆ: ಚೆಯ್ಯಂಡಾಣೆ ಗ್ರಾ.ಪಂ.ನಲ್ಲಿನ ಮತಗಟ್ಟೆಯ ಉಸ್ತುವಾರಿಯನ್ನು ಅಧಿಕಾರಿಗಳಾದ ಮಿಥುನ್, ಸೋಮಶೇಖರ್, ವಿ.ಟಿ. ಮೋಹನ್ ವಹಿಸಿದರು.

ನಾಪೋಕ್ಲು ಪೊಲೀಸ್ ಠಾಣೆಯ ಮಧುಸೂದನ್, ಮಹದೇವ ನಾಯಕ ಉಸ್ತುವಾರಿಯಲ್ಲಿ ಬೂತ್‌ನಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಒಟ್ಟು ೧೫ ಸದಸ್ಯರ ಪೈಕಿ ೧೩ ಸದಸ್ಯರು ಬೆಳಿಗ್ಗೆ ೯ ಗಂಟೆಗೂ ಮುಂಚಿತವಾಗಿ ಮತದಾನ ಚಲಾಯಿಸಿದ್ದು ವಿಶೇಷವಾಗಿತ್ತು. ಉಳಿದ ಇಬ್ಬರು ತಡವಾಗಿ ಮತದಾನ ಮಾಡಿದರು.ಪೊನ್ನಂಪೇಟೆ: ಪೊನ್ನಂಪೇಟೆಯಲ್ಲಿರುವ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯಿತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦ ಸದಸ್ಯ�