ಮಡಿಕೇರಿ, ಡಿ. ೧೦: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಿನ್ನೆಲೆ ತಾ.೧೨ರಂದು ವಿದ್ಯಾಸಂಘದ ಸಭೆ ಕರೆಯಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಬಿ ಮೂರ್ತಿ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜರಾಯಪಟ್ಟಣ ಪ್ರೌಢಶಾಲೆ ೧೯೭೧ರಲ್ಲಿ ಆರಂಭಗೊAಡಿದ್ದು, ೫೦ ವರ್ಷಗಳ ಇತಿಹಾಸ ಹೊಂದಿದೆ. ಆರಂಭದಲ್ಲಿ ೪೮ ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇದುವರೆಗೂ ೩ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಏಳಿಗೆ ಕಂಡಿದ್ದಾರೆ. ಇದೀಗ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆಗೊಂಡಿದ್ದು, ತಾ. ೧೨ರ ಸಭೆಯಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಸುವರ್ಣ ಮಹೋತ್ಸವ ಕುರಿತು ಚರ್ಚಿಸಲಾಗುವುದು ಎಂದರು.

ಸAಘದ ಅಧ್ಯಕ್ಷ ಕೆದಂಬಾಡಿ ಸೋಮಣ್ಣ ಮಾತನಾಡಿ, ಶಾಲೆಯ ಕೊಠಡಿಗಳ ನವೀಕರಣ, ಕಂಪ್ಯೂಟರೀಕರಣ, ಆಟದ ಮೈದಾನ ಮತ್ತು ಗ್ಯಾಲರಿ, ಅಂಕಣದ ಸುತ್ತ ಕಾಂಪೌAಡ್ ನಿರ್ಮಾಣ, ಪೀಠೋಪಕರಣಗಳ ನವೀಕರಣ, ಸ್ಮಾರ್ಟ್ಕ್ಲಾಸ್ ಅಳವಡಿಕೆ, ಗ್ರಂಥಾಲಯ ಅಭಿವೃದ್ಧಿ ಹಾಗೂ ಬಯಲು ರಂಗ ಮಂದಿರ ನಿರ್ಮಾಣದ ಉದ್ದೇಶದಿಂದ ಹಳೆ ವಿದ್ಯಾರ್ಥಿ ಸಂಘ ರಚಿಸಲಾಗಿದೆ. ಜಿಲ್ಲೆಯಲ್ಲಿರುವ ಹಾಗೂ ಜಿಲ್ಲೆಯ ಹೊರ ಭಾಗದಲ್ಲಿರುವ ಶಾಲೆಯ ಹಳೆ ವಿದ್ಯಾರ್ಥಿಗಳು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎ.ಎಂ ಲೋಕನಾಥ್, ನಿರ್ದೇಶಕರಾದ ಯತೀಶ್, ಪ್ರೇಮಾನಂದ್, ಶಿಕ್ಷಕ ಚೇತನ್ ಉಪಸ್ಥಿತರಿದ್ದರು.