ಮಡಿಕೇರಿ, ಡಿ. ೧೦: ಉಮ್ಮತ್ ಒನ್ ಕೊಡಗು ಹಾಗೂ ಕೊಟ್ಟಮುಡಿ ಜಮಾಅತ್ ಇವರ ಜಂಟಿ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಕೊಟ್ಟಮುಡಿ ಮರ್ಕಝಲ್ ಹಿದಾಯದಲ್ಲಿ ತಾ. ೧೨ ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಮಾಧ್ಯಮ ವಕ್ತಾರ ನೌಶಾದ್ ಜನ್ನತ್ ತಿಳಿಸಿದರು.

ಅಂದು ಬೆಳಗ್ಗೆ ೮ ರಿಂದ ಸಂಜೆ ೪ ರವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಗುವುದು. ಜನರಲ್ ಮೆಡಿಸಿನ್, ಮಕ್ಕಳ ತಜ್ಞರು, ಸ್ತಿçà ರೋಗ - ಹೆರಿಗೆ ತಜ್ಞರು, ಕಣ್ಣಿನ ತಜ್ಞರು, ಇಎನ್‌ಟಿ ತಜ್ಞರು, ಮೂಳೆ ರೋಗ ತಜ್ಞರು, ಚರ್ಮರೋಗ ತಜ್ಞರು, ಮೂತ್ರ ಪಿಂಡ ರೋಗ ತಜ್ಞರು, ಕ್ಯಾನ್ಸರ್ ತಜ್ಞರು, ಪಾಲ್ಗೊಳ್ಳಲಿದ್ದಾರೆ. ಬಿಪಿ, ಶುಗರ್, ಇಸಿಜಿ ಉಚಿತವಾಗಿ ಮಾಡುವುದರ ಜತೆಗೆ ಆರೋಗ್ಯ ಕಾರ್ಡ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟ್ರಸ್ಟ್ನ ಅಧ್ಯಕ್ಷ ಎಂ.ಬಿ. ಬಷೀರ್ ಮಾತನಾಡಿ, ತಾ. ೧೨ ರಂದು ಆರೋಗ್ಯ ಜಾಗೃತಿ ಆರೋಗ್ಯಕರ ಜೀವನ ಶೈಲಿ ಕುರಿತು ತಜ್ಞರಿಂದ ವಿಚಾರ ಮಂಥನ ನಡೆಯಲಿದೆ. ಜತೆಗೆ ಅಂದು ನಾಪೋಕ್ಲು ಮತ್ತು ಸುತ್ತಮತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲು ೧೦೦೦ ಡೋಸ್ ಕೋವಿಡ್ ಲಸಿಕೆ ನೀಡಲಾಗುವುದು. ಈಗಾಗಲೇ ೩೦೦ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಕೋಶಾಧಿಕಾರಿ ಸಿ.ಎಂ. ಹಮೀದ್ ಉಸ್ತಾದ್, ಟ್ರಸ್ಟಿ ಮೊಹಮ್ಮದ್ ಹಾಜಿ ಇದ್ದರು.