ಮಡಿಕೇರಿ, ಡಿ. ೧೦: ತುಳುವೆರ ಜನಪದ ಕೂಟದ ಚೇರಂಬಾಣೆ ಹೋಬಳಿ ಅಧ್ಯಕ್ಷರಾಗಿ ಎಂ.ಪಿ. ಪವನ್ ಕುಲಾಲ್ ಆಯ್ಕೆಯಾಗಿದ್ದಾರೆ.

ಕೂಟದ ಜಿಲ್ಲಾಧ್ಯಕ್ಷ ಬಿ.ಬಿ. ಐತ್ತಪ್ಪ ರೈ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.