ಕುಶಾಲನಗರ, ಡಿ.೮: ಕಾವೇರಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಬೌದ್ಧ ಭಿಕ್ಷುಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಮೀಪದ ರಾಣಿ ಗೇಟ್ ಬಳಿ ನಡೆದಿದೆ.

ಬೈಲುಕೊಪ್ಪೆ ನಿರಾಶಿತ ಟಿಬೆಟಿಯನ್ ಶಿಬಿರದ ಬೌದ್ಧ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಾದ ಪೇಮ ಸೇರಿಂಗ್ ಲಕ್ಷö್ಮ (೧೮) ಮತ್ತು ಪೇಮ ಲೆಯಾರೋ (೧೮) ಮತಪಟ್ಟ ದುರ್ದೈವಿಗಳು.

ಮಂಗಳವಾರ ಸಂಜೆ ಶಿಬಿರದಿಂದ ೫ ಮಂದಿ ಬೌದ್ಧ ಭಿಕ್ಷುಗಳು ಸಮೀಪದ ರಾಣಿ ಗೇಟ್ ಬಳಿ ಮರೂರು ವ್ಯಾಪ್ತಿಯ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭ ಘಟನೆ ಸಂಭವಿಸಿದ್ದು ಇಬ್ಬರು

(ಮೊದಲ ಪುಟದಿಂದ) ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಎಸ್. ಪುಟ್ಟರಾಜು ತಿಳಿಸಿದ್ದಾರೆ.

ಮುಳುಗಿದ ಇಬ್ಬರ ಮೃತದೇಹಗಳನ್ನು ಕುಶಾಲನಗರದ ಮುಳುಗು ತಜ್ಞ ರಾಮಕೃಷ್ಣ ಎಂಬವರು ನದಿಯಿಂದ ಹೊರ ತೆಗೆದಿದ್ದು ಮಂಗಳವಾರ ಒಂದು ಮೃತದೇಹ ದೊರಕಿದ್ದು ಇನ್ನೊಬ್ಬನ ಮೃತದೇಹವನ್ನು ಬುಧವಾರ ಮೇಲೆತ್ತಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಎಸ್. ಪುಟ್ಟರಾಜು ಸಿಬ್ಬಂದಿಗಳಾದ ಅಣ್ಣಯ್ಯ, ಮಹಾದೇವ, ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಂತರ ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.