ಕೂಡಿಗೆ, ಡಿ. ೮: ಕೂಡಿಗೆಯ ಕೊಡವ ಕೂಟದ ವಾರ್ಷಿಕ ಮಹಾ ಸಭೆ ಮತ್ತು ಸಂತೋಷಕೂಟ ಕೂಡಿಗೆ ರಾಮಲಿಂಗೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುAಡ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮನು ನಂಜುAಡ ಇಂದಿನ ಯುವ ಪೀಳಿಗೆ ನಮ್ಮ ಆಚಾರ ವಿಚಾರವನ್ನು ಮುಂದಿನ ಯುವಪೀಳಿಗೆಗೆ ತಿಳಿಸುವಂತಹ ರೀತಿಯಲ್ಲಿ ಜನಾಂಗ ಮುನ್ನಡೆಯಬೇಕೆಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮೊಳ್ಳೆರ ಅಪ್ಪಯ್ಯ ಮಾತನಾಡಿ ಕೊಡವ ಕೂಟಗಳು ಕೊಡಗಿನ ಎಲ್ಲಾ ಕಡೆ ಹೆಚ್ಚು ಹೆಚ್ಚು ಬೆಳೆಯು ವಂತಾಗಬೇಕು, ನಮ್ಮ ಸಂಸ್ಕೃತಿ ಉಳಿಯುವಂತಾಗಬೇಕು ಎಂದರು. ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ ಮತ್ತು ಪದಾಧಿಕಾರಿಗಳು ಹಾಜರಿದ್ದರು. ಐಮುಡಿಯಂಡ ಸವಿತಾ ರಮೇಶ್ ಸ್ವಾಗತಿಸಿ, ಕೆ. ಮಂದಪ್ಪ ವಂದಿಸಿದರು.