ಮಡಿಕೇರಿ, ಡಿ. ೯: ಭಾರತ ಸರಕಾರವು ಅಸಂಘಟಿತ ವಲಯದ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಎಲ್ಲಾ ಕಾರ್ಮಿಕರ ಡೇಟಾಬೇಸ್ ಅನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ ಮೂಲಕ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ವೇದಿಕೆ ಕಲಾವಿದರು, ಬೀದಿಬದಿ ವ್ಯಾಪಾರಿಗಳು, ಸವಿತಾ ಸಮಾಜದವರು, ಚಾಲಕರು, ಕಲ್ಲು ಕ್ವಾರಿ ಕೆಲಸಗಾರರು, ಹೈನುಗಾರಿಕಾ ರೈತರು, ಗೃಹ ಕಾರ್ಮಿಕರು, ಕೃಷಿ ಕಾರ್ಮಿಕರು, ತರಕಾರಿ, ಹಣ್ಣು ಮಾರಾಟಗಾರರು ಇತ್ಯಾದಿ ಹಾಗೂ ಇತರ ಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಯೋಜನೆಯಡಿಯಲ್ಲಿ ನೋಂದಣಿಯಾದ ನಂತರ ೧೨-ಅಂಕಿಯ ವಿಶಿಷ್ಟ (ಯುನಿವರ್ಸಲ್ ಖಾತೆ ಸಂಖ್ಯೆ Uಂಓ) ಇ-ಶ್ರಮ ಕಾರ್ಡ್ ನೀಡಲಾಗುವುದು.

ಅರ್ಹತೆ: ವಯಸ್ಸು ೧೬-೫೯ ವರ್ಷಗಳ ನಡುವೆ ಇರಬೇಕು, ಇPಈಔ ಅಥವಾ ಇSI ನ ಸದಸ್ಯರಾಗಿರಬಾರದು, ಆದಾಯ ತೆರಿಗೆ ಪಾವತಿಸುವವರಾಗಿರಬಾರದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು.

ತರಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ಆಧಾರ್ ಕಾರ್ಡ್ನಲ್ಲಿರುವ ಸಕ್ರಿಯ ಮೊಬೈಲ್, ಸಕ್ರಿಯ ಬ್ಯಾಂಕ್ ಖಾತೆಯ ವಿವರ, ನಾಮಿನಿಯವರ ಆಧಾರ್ ಕಾರ್ಡ್.

ತಾ. ೧೧ ರಂದು ಚೆಂಬು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಹಾಗೂ ತಾ. ೧೩ ರಂದು ಸಂಪಾಜೆ ಪ.ಪ್ರಾ.ಕೃ.ಸ. ಸಂಘದ ಸಭಾಭವನದಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟೆವರೆಗೆ ಉಚಿತ ನೋಂದಾವಣೆ ನಡೆಯಲಿದೆ.