ಮಡಿಕೇರಿ, ಡಿ. ೯: ಉಡೋತ್ ಮೊಟ್ಟೆ ಗ್ರಾಮದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಕೊರಗಜ್ಜ ಪ್ರತಿಷ್ಠಾಪನೆ ಮತ್ತು ಪರಿವಾರ ದೈವಗಳ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ಭಂಡಾರ ತೆಗೆಯಲಾಯಿತು. ಎರಡು ದಿನಗಳ ನಡೆದ ನೇಮೋತ್ಸವ ದಲ್ಲಿ ಪರಿವಾರ ದೈವಗಳಾದ ಕಲ್ಲುರ್ಟಿ ದೈವದ ಕೋಲ, ಧರ್ಮದೈವದ ನೇಮ ಹಾಗೂ ಕೊರಗಜ್ಜ ದೈವದ ನೇಮ ನಡೆಯಿತು. ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನೇಮೋತ್ಸವದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.