*ವೀರಾಜಪೇಟೆ, ಡಿ. ೯: ಚಿಕಿತ್ಸೆಗೆ ರೋಗಿಯಿಂದ ಹಣದ ಬೇಡಿಕೆ ಇಟ್ಟಿದ್ದ ವೈದ್ಯಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಬಲೆಗೆ ಬಿದ್ದ ಘಟನೆ ವೀರಾಜಪೇಟೆಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಸಿಂಪಿ ಲಂಚ ಪಡೆದ ಆರೋಪದಡಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಳಗಾದ ವೈದ್ಯಾಧಿಕಾರಿಯಾಗಿದ್ದಾರೆ.

ವೀರಾಜಪೇಟೆಯ ಪೂಮಾಲೆ ಮಂದ್ ನಿವಾಸಿ ಸೂರ್ಯ

ಅವರಿಗೆ ನವೆಂಬರ್

(ಮೊದಲ ಪುಟದಿಂದ) ೨೯ ರಂದು ಅಪೆಂಡಿಕ್ಸ್ ಶಸ್ತçಚಿಕಿತ್ಸೆ ಸಲುವಾಗಿ ಆರು ಸಾವಿರ ರೂಪಾಯಿ ಹಣಕ್ಕೆ ವೈದ್ಯಾಧಿಕಾರಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಸೂರ್ಯ ಅವರ ಆರ್ಥಿಕ ಪರಿಸ್ಥಿತಿ ತಿಳಿಸಿದ ಬಳಿಕ ಐದು ಸಾವಿರ ಹಣಕ್ಕೆ ಒಪ್ಪಿಗೆ ಸೂಚಿಸಿದ್ದರು. ಶಸ್ತçಚಿಕಿತ್ಸೆ ಸಂದರ್ಭದಲ್ಲಿ ಮೂರು ಸಾವಿರ ಹಣವನ್ನು ಆನ್‌ಲೈನ್ ವರ್ಗಾವಣೆ ಮೂಲಕ ಪಡೆದಿದ್ದ ವೈದ್ಯರು, ಬಾಕಿ ೨ ಸಾವಿರ ಹಣವನ್ನು ಹೊಲಿಗೆ ಬಿಚ್ಚುವ ಸಮಯದಲ್ಲಿ ನೀಡುವಂತೆ ತಿಳಿಸಿದ್ದರು. ಇಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ೨ ಸಾವಿರ ಹಣವನ್ನು ನೀಡುವ ವೇಳೆ ಸೂರ್ಯ ಅವರ ಪತ್ನಿ ಲಲಿತಾ ಅವರು ನೀಡಿದ ದೂರಿನ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಲಂಚದ ಹಣ ಸಮೇತ ವಿಶ್ವನಾಥ ಸಿಂಪಿಯವರನ್ನು ಬಂಧಿಸಲಾಗಿದೆ.

ಎಸಿಬಿ ಅಧಿಕಾರಿಗಳ ಸುದೀರ್ಘ ವಿಚಾರಣೆಯ ಬಳಿಕ ವೀರಾಜಪೇಟೆಯ ಎರಡನೇ ಜಿಲ್ಲಾ ಅಪಾರ ಹಾಗೂ ಸತ್ರ ನ್ಯಾಯಾಲಯದ ನ್ಯಾಯಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಧೀಶರು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ದಾಳಿ ಸಂದರ್ಭ ಡಿವೈಎಸ್ಪಿ ಹೆಚ್. ಕೃಷ್ಣಮೂರ್ತಿ, ಇನ್ಸಪೆಕ್ಟರ್‌ಗಳಾದ ಕೃಷ್ಣಕುಮಾರ್ ಮತ್ತು ಹರೀಶ್, ಸಿಬ್ಬಂದಿಗಳಾದ ಎಸ್.ಜೆ. ದಿನೇಶ್, ಸಜನ್, ಲೋಹಿತ್, ಪ್ರವೀಣ್, ಮಹಿಳಾ ಪೊಲೀಸ್ ದೀಪಿಕಾ, ಚಾಲಕ ವಿಶ್ವನಾಥ, ಸುರೇಶ್ ಹಾಜರಿದ್ದರು. -ಉಷಾಪ್ರೀತಮ್