ಮಡಿಕೇರಿ, ಡಿ. ೭: ಮಡಿಕೇರಿಯ ಹಿಂದೂಸ್ಥಾನಿ ಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿ ಇನ್ನರ್ ವೀಲ್ ಕ್ಲಬ್ನಿಂದ ಪಠ್ಯೇತರ ಉಪಯೋಗಕ್ಕಾಗಿನ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಹಿಂದೂಸ್ಥಾನಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಗಳು, ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯವಾದ ಪರಿಕರಗಳನ್ನು ಇನ್ನರ್ ವೀಲ್ ಅಧ್ಯಕ್ಷೆ ಶಫಾಲಿ ರೈ ವಿತರಿಸಿದರು. ಈ ಸಂದರ್ಭ ಇನ್ನರ್ ವೀಲ್ ಕಾರ್ಯದರ್ಶಿ ಶಮ್ಮಿ ಪ್ರಭು, ನಿರ್ದೇಶಕರುಗಳಾದ ನಮಿತಾ ರೈ, ಪವಿತ್ರ ನೆವೀನ್ ಹಾಜರಿದ್ದರು.