ತಂಡದಲ್ಲಿ ಕೊಡಗಿನ ೧೦ ಆಟಗಾರರು
ಮಡಿಕೇರಿ, ಡಿ. ೮: ಹಾಕಿ ಇಂಡಿಯಾ ವತಿಯಿಂದ ಮಹಾರಾಷ್ಟçದ ಪುಣೆಯಲ್ಲಿ ಡಿ. ೧೧ ರಿಂದ ೨೨ರವರೆಗೆ ನಡೆಯಲಿರುವ ೧೧ನೇ ರಾಷ್ಟಿçÃಯ ಸೀನಿಯರ್ ಮೆನ್ ಹಾಕಿ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕ ರಾಜ್ಯ ತಂಡದ ಆಟಗಾರರ ಪೈಕಿ ಕೊಡಗಿನವರಾದ ೧೦ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ತಂಡದ ಸದಸ್ಯರ ಪೈಕಿ ಕೊಡಗಿನವರಾದ ಶರತ್ ಸೋಮಣ್ಣ ಹಾಗೂ ಸುಬ್ರಮಣಿ ಎ.ಸಿ. (ಗೋಲ್ ಕೀರ್ಸ್) ಲಿಖಿತ್ ಬಿ.ಎಂ., ಸೋಮಣ್ಣ ಬಿ.ಪಿ., ಶಮಂತ್ ಸಿ.ಎಸ್., ಚಿರಂತ್ ಸೋಮಣ್ಣ ಎಂ.ಡಿ., ಸೂರ್ಯ ಎನ್.ಎಂ., ಬೋಪಣ್ಣ ಕೆ.ಸಿ., ಯನೀಶ್ ಕುಮಾರ್ ಬಿ. ಹಾಗೂ ಅಚ್ಚಯ್ಯ ಡಿ.ಎಂ. ಸ್ಥಾನ ಪಡೆದಿದ್ದಾರೆ.
ತಂಡದ ನಾಯಕನಾಗಿ ಮಹಮದ್ ರಹೀಲ್ ಆಯ್ಕೆಯಾಗಿರುವುದಾಗಿ ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.