ಮಡಿಕೇರಿ, ಡಿ. ೭: ಮೈಸೂರು ಹೂಟಗಳ್ಳಿಯ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘವು ೭ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಿತ್ತು.
ವಿಜಯನಗರ ೪ನೇ ಹಂತದ ನೀರಿನ ಟ್ಯಾಂಕ್ ಬಳಿಯ ಉದ್ಯಾನವನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೊಡಗು ಗೌಡ ಸಮುದಾಯದವರು ಭಾಗವಹಿಸಿ ಸಂಭ್ರಮಿಸಿದರು. ಕೊಡಗಿನ ಸಾಂಪ್ರದಾಯಿಕ ಆಟಗಳಾದ ಕಾಳು ಹೆಕ್ಕುವುದು, ಬಾಲಕ-ಬಾಲಕಿಯರಿಗೆ ಕಪ್ಪೆ ಕುಪ್ಪಳಿಸುವ ಆಟೋಟದ ಸ್ಪರ್ಧೆಗಳು, ನೀರು ತುಂಬಿದ ಲೋಟಕ್ಕೆ ನಾಣ್ಯ ಹಾಕುವುದು, ಭಾರದ ಗುಂಡು ಎಸೆತ, ಸಂಗೀತ ಕುರ್ಚಿ, ಪಾಸಿಂಗ್ ದ ಬಾಲ್, ನಡಿಗೆ ಸ್ಪರ್ಧೆ ಹಾಗೂ ಬಾಂಬ್ ಇನ್ ದ ಸಿಟಿ ಮತ್ತಿತರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಅಲ್ಲಿನ ಕೋವಿಡ್ ವಾರಿಯರ್ಸ್ಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದಾನಿಗಳಾದ ಪೊನ್ನಚ್ಚನ ಅಪ್ಪಯ್ಯ, ಕೂಡಕಂಡಿ ದೀಕ್ಷಿತ್, ಉದಿಯನ ಸುರೇಶ್, ಪುದಿಯನೆರವನ ಚಂದ್ರಶೇಖರ್, ಮೂವನ ನವೀನ್, ಕುಂಜಿಲನ ನಾಗರಾಜು, ಗುತ್ತಿಮುಂಡನ ಚಂದ್ರಶೇಖರ್, ಬೆಪ್ಪುರನ ಗಾಯತ್ರಿ, ಕುಯ್ಯಮುಡಿ ಗೀತಾ, ಚರುಕನ ಕುಶ ಹಾಗೂ ಚೆಟ್ಟಿಮಾಡ ಜನಾರ್ಧನ್ ವಿಶೇಷ ಧನ ಸಹಾಯ ಮಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಕಡ್ಲೇರ ತುಳಸಿ ಮೋಹನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೇ. ಡಾ. ಕುಶ್ವಂತ್ ಕೋಳಿಬೈಲು, ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಡುಮನೆ ಚೆಂಗಪ್ಪ, ಉಪಾಧ್ಯಕ್ಷ ಬೆಪ್ಪುರನ ಗಾಯತ್ರಿ, ಗೌರವ ಕಾರ್ಯದರ್ಶಿ ಬೋಳನ ಜಯಪ್ರಸಾದ್, ಸಹ ಕಾರ್ಯದರ್ಶಿ ನಿಡ್ಯಮಲೆ ನಂದೀಶ್, ಖಜಾಂಚಿ ಪೊನ್ನಚ್ಚನ ಅಪ್ಪಯ್ಯ, ನಿರ್ದೇಶಕ ಕೂಡಕಂಡಿ ದೀಕ್ಷಿತ್, ಉದಿಯನ ಸುರೇಶ್, ಸೂರ್ತಲೆ ಹರೀಶ್, ಚರುಕನ ಕುಶ, ಮೂವನ ನವೀನ್, ಕುಯ್ಯಮುಡಿ ಗೀತಾ, ಪುದಿಯನೆರವನ ಚಂದ್ರಶೇಖರ್, ಕಾಳಮನೆ ಉಲ್ಲಾಸ್, ಕುಂಜಿಲನ ನಾಗರಾಜು ಭಾಗವಹಿಸಿದ್ದರು.