ವೀರಾಜಪೇಟೆ, ಡಿ. ೮: ವೀರಾಜಪೇಟೆ ಪ.ಪಂ.ಯ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ವೀರಾಜಪೇಟೆ ಪ.ಪಂ.ಯಿAದ ಮ್ಯಾನ್ಯುವೆಲ್ ಸ್ಕಾö್ಯವೆಂಜರ್ ಕುರಿತು ಸಮೀಕ್ಷೆಯನ್ನು ತಾ. ೧೬ ರಂದು ಕೈಗೊಳ್ಳಳಾಗುತ್ತಿದ್ದು, ‘ಖಿhe Pಡಿohibiಣioಟಿ oಜಿ emಠಿಟoಥಿmeಟಿಣ ಚಿs mಚಿಟಿuಚಿಟ Sಛಿಚಿveಟಿgeಡಿs & ಖಿheiಡಿs ಖehಚಿbiಟiಣಚಿಣioಟಿ ಂಛಿಣ -೨೦೧೩’ರಲ್ಲಿ ತಿಳಿಸಿರುವಂತೆ ಯಾವುದೇ ವ್ಯಕ್ತಿಯು ಒಣ ಶೌಚಾಲಯ ಸ್ವಚ್ಛತೆಯಲ್ಲಿ ತೊಡಗಿದ್ದರೆ, ನೇರವಾಗಿ ಮಲವು ಶೌಚಾಲಯಗಳಿಂದ ತೆರೆದ ಚರಂಡಿಗಳಿಗೆ ಹರಿದು ಬಂದ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ, ಒಂದೇ ಗುಂಡಿಯನ್ನು ಹೊಂದಿದ ಶೌಚಾಲಯಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿದವರು ವೀರಾಜಪೇಟೆ ಪ.ಪಂ. ಸ್ವಯಂ ಘೋಷಣೆ ಮಾಡಿಕೊಳ್ಳಲು ಕೋರಲಾಗಿದೆ.

ನೋಂದಾವಣೆಗೆ ಬರುವಾಗ ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ (ಮೂಲದೊಂದಿಗೆ), ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ (ಮೂಲದೊಂದಿಗೆ) ರೇಷನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ಇವುಗಳಲ್ಲಿ ಯಾವುದಾದರೊಂದು ಗುರುತಿನ ಪತ್ರದ ಜೆರಾಕ್ಸ್ ಪ್ರತಿ, ಮ್ಯಾನ್ಯುವಲ್ ಸ್ಕಾö್ಯವೆಂಜರ್ ವೃತ್ತಿಗೆ ಒತ್ತುಕೊಡು ವಂತಹ ಯಾವುದೇ ದಾಖಲಾತಿಗಳು (ಮೂಲಪ್ರತಿ) ಕಡ್ಡಾಯವಾಗಿ ತರಬೇಕು. ಅಂಗನವಾಡಿ ಕೇಂದ್ರ ಶಿವಕೇರಿ ಮತ್ತು ಉರ್ದು ಶಾಲೆ ಪಂಜರುಪೇಟೆಯಲ್ಲಿ ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೆ ನೋಂದಣಿ ಕಾರ್ಯ ನಡೆಯಲಿದೆ.