ಸೋಮವಾರಪೇಟೆ, ಡಿ. ೮: ಸಮೀಪದ ಗೌಡಳ್ಳಿ ಶ್ರೀ ನವದುರ್ಗ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ದೇವಾಲಯದ ಸನ್ನಿಧಿಯಲ್ಲಿ ದೈವಗಳ ನೇಮೋತ್ಸವ ಕಾರ್ಯಕ್ರಮ ತಾ. ೧೦ ಮತ್ತು ೧೧ರಂದು ನಡೆಯಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ವಿಶ್ವರೂಪಾಚಾರ್ ತಿಳಿಸಿದ್ದಾರೆ.

ತಾ. ೧೦ ರಂದು ಬೆಳಿಗ್ಗೆ ೭ ಗಂಟೆಗೆ ದೈವದ ಭಂಡಾರ ಇಡುವ ಗುಡಿಯ ಪ್ರತಿಷ್ಠಾಪನೆಯ ಅಂಗವಾಗಿ, ವಾಸ್ತು ಹೋಮ, ರಕ್ಷೆÆÃಘ್ನ ಹೋಮ, ದೈವದ ಆಯುಧಗಳ ಪ್ರವೇಶ ಪೂಜೆ ನಡೆಯುವುದು. ತಾ. ೧೧ ರಂದು ಬೆಳಿಗ್ಗೆ ೮ಕ್ಕೆ ನಾಗದೇವರಿಗೆ ಆಶ್ಲೇಷ ಬಲಿ ಪೂಜೆ ಮತ್ತು ಗಣ ಹೋಮ ನಡೆಯಲಿದೆ. ರಾತ್ರಿ ಶ್ರೀ ರಕ್ತೇಶ್ವರಿ, ಶ್ರೀ ವರ್ನಾರ ಪಂಜುರ್ಲಿ ಮತ್ತು ಶ್ರೀ ಮಂತ್ರವಾದಿ ಗುಳಿಗ ದೇವರಿಗೆ ನರ್ತನ ಸೇವೆ, ನೇಮೋತ್ಸವ ಕಾರ್ಯಕ್ರಮಗಳು ನಡೆಯಲಿವೆ.