ಮಡಿಕೇರಿ, ಡಿ. ೮: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಎನ್‌ಸಿಸಿ ವಿಭಾಗದಲ್ಲಿ ಈತನಕ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕಿ ಡಾ. ಸಣ್ಣುವಂಡ ಬೀನಾ ಅವರು ಇದೀಗ ಕ್ಯಾಪ್ಟನ್ ಆಗಿ ನಿಯುಕ್ತಿಗೊಂಡಿದ್ದಾರೆ. ಗ್ವಾಲಿಯರ್‌ನಲ್ಲಿನ ಆಫೀರ‍್ಸ್ ಟ್ರೆöÊನಿಂಗ್ ಅಕಾಡೆಮಿಯಲ್ಲಿ ನಡೆದ ರಿಫ್ರೆಷರ್ ಕೋರ್ಸ್ನಲ್ಲಿ ಸಮಗ್ರ ವಿಭಾಗದಲ್ಲಿ ಉತ್ತಮ ಸಾಧನೆಯೊಂದಿಗೆ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿಯ ಪದಕವನ್ನು ಇವರು ಪಡೆದುಕೊಂಡಿದ್ದಾರೆ. ಈ ಮೂಲಕ ಇದೀಗ ಎನ್‌ಸಿಸಿಯಲ್ಲಿ ಲೆಫ್ಟಿನೆಂಟ್‌ನಿAದ ಕ್ಯಾಪÀ್ಟನ್ ಆಗಿ ಡಾ. ಬೀನಾ ನಿಯುಕ್ತಿಗೊಳ್ಳುತ್ತಿದ್ದಾರೆ. ಇವರು ಎಂ.ಕಾA, ಎಂ.ಬಿ.ಎ., ಎಂ.ಫಿಲ್ ಹಾಗೂ ಪಿಎಚ್‌ಡಿ ಪದವಿಯನ್ನು ಗಳಿಸಿದ್ದಾರೆ.