ಕೂಡಿಗೆ, ಡಿ. ೭: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಹೆಬ್ಬಾಲೆ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ, ವಿದ್ಯಾವರ್ಧಕ ಸಂಘ, ಹೆಬ್ಬಾಲೆಯ ಶಾಲಾ ಆಡಳಿತ ಮಂಡಳಿ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸಭೆಯು ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಒಂದೇ ಒಂದು ಸಂಘ ಮಾತ್ರ ಇರಲಿ ಎಂಬ ಉದ್ದೇಶದಿಂದ ನಾಪಂಡ ಮುತ್ತಪ್ಪ ಮತ್ತು ಶಿವಪ್ಪ ಅವರನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಯಿತು. ಭಾರದ್ವಾಜ್ ಆನಂದತೀರ್ಥ ಮತ್ತು ವಿಜಯ, ನೀಲಕಂಠರಾಯ, ಎಂ.ಎನ್. ಮೂರ್ತಿ, ಸುಬ್ರಮಣ್ಯ, ಸಾಂಬ ಶಿವಮೂರ್ತಿ, ಲೋಕೇಶ್, ಜಯಮ್ಮ, ಗಣೇಶ, ಉಮೇಶಭಟ್ಟ ಮತ್ತಿತರರಿದ್ದರು. ಈ ಸಂದರ್ಭ ಬನವಾಸಿ ಕನ್ನಡಿಗ ಪ್ರಶಸ್ತಿ ಪಡೆದ ಶಾಲೆಯ ಹಿರಿಯ ವಿದ್ಯಾರ್ಥಿ ಕಣಿವೆ ಭಾರದ್ವಾಜ್ ಹಾಗೂ ಶಿಕ್ಷಕರ ಸೇವೆಯಿಂದ ನಿವೃತ್ತಿ ಹೊಂದಿದ ಗಣೇಶ್ ಇವರುಗಳನ್ನು ಸನ್ಮಾನಿಸಲಾಯಿತು.