ಮಡಿಕೇರಿ, ಡಿ. ೮: ವಿಧಾನ ಪರಿಷತ್ ಚುನಾವಣೆ ತಾ. ೧೦ರಂದು (ನಾಳೆ) ನಡೆಯಲಿದ್ದು, ಬೆಳಿಗ್ಗೆ ೮ ಗಂಟೆಯಿAದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಬಿಜೆಪಿಯಿಂದ ಸುಜಾ ಕುಶಾಲಪ್ಪ, ಕಾಂಗ್ರೆಸ್‌ನಿAದ ಡಾ. ಮಂತರ್‌ಗೌಡ ಸ್ಪರ್ಧಾ ಕಣದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು ೧೩೨೯ ಮತದಾರರಿದ್ದಾರೆ. ಒಟ್ಟು ೧೦೪ ಗ್ರಾಮ ಪಂಚಾಯಿತಿಗಳಲ್ಲಿ ೫೯೨ ಪುರುಷರು, ೬೫೫ ಮಹಿಳೆಯರು ಸೇರಿ ೧೨೪೭ ಮತದಾರರಿದ್ದಾರೆ.

ಮಡಿಕೇರಿ ನಗರಸಭೆಯಲ್ಲಿ ೨೩ ಸದಸ್ಯರೊಂದಿಗೆ ಇಬ್ಬರು ಹಾಲಿ ಎಂಎಲ್‌ಸಿಗಳು, ಓರ್ವ ಎಂಎಲ್‌ಎ ಹಾಗೂ ಸಂಸದರು ಸೇರಿದಂತೆ ೨೭ ಮತದಾರರಿದ್ದು, ಈ ಪೈಕಿ ೧೫ ಪುರುಷರು, ೧೨ ಮಹಿಳೆಯರಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ೧೨ ಪುರುಷರು, ೭ ಮಹಿಳೆಯರು ಸೇರಿ ೧೯ ಮತದಾರರಿದ್ದಾರೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ೧೦ ಪುರುಷರು, ೪ ಮಹಿಳೆಯರು ಸೇರಿ ೧೪ ಮತದಾರರಿದ್ದಾರೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ೨೧ ಸದಸ್ಯರು, ಓರ್ವ ಎಂಎಲ್‌ಎ ಸೇರಿ ೨೨ ಮತದಾರರಿ ದ್ದಾರೆ.

ಮಡಿಕೇರಿ ಕಾವೇರಿ ಕಲಾಕ್ಷೇತ್ರದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಸಂಸದರು, ಮಡಿಕೇರಿ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಮಡಿಕೇರಿ ನಗರಸಭೆಯ ಎಲ್ಲಾ ಸದಸ್ಯರುಗಳಿಗೆ ಮತದಾನದ ಅವಕಾಶ ಕಲ್ಪಿಸಲಾಗಿದೆ.

ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಸದಸ್ಯರುಗಳಿಗೆ ಕುಶಾಲನಗರ ಪಟ್ಟಣ ಪಂಚಾಯಿತಿಯ ಸದಸ್ಯರುಗಳಿಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯರುಗಳಿಗೆ ಮತ್ತು ವೀರಾಜಪೇಟೆ ಶಾಸಕರಿಗೆ ಮತದಾನದ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯರುಗಳಿಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾನದ ಅವಕಾಶ ಕಲ್ಪಿಸಲಾಗಿದೆ.

ಉಳಿದಂತೆ ೧೦೩ ಗ್ರಾ.ಪಂ.ಗಳ ಸದಸ್ಯರಿಗೆ ಆಯಾಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿಯೇ ವ್ಯವಸ್ಥೆ ಮಾಡಲಾಗಿದೆ.

ಚುನಾವಣೆಯನ್ನು ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ನಡೆಸಲು ಜಿಲ್ಲೆಯಲ್ಲಿ ಒಟ್ಟು ೧೪ ಫ್ರೆöÊಯಿಂಗ್ ಸ್ಕಾ÷್ವಡ್ ತಂಡವನ್ನು ಮತ್ತು ಪ್ರತಿ ೫-೬ ಮತಗಟ್ಟೆಗೆ ಒಬ್ಬರಂತೆ ೨೦ ಸೆಕ್ಟರ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಆ ತಂಡಗಳು ಅವರ ವ್ಯಾಪ್ತಿಯಲ್ಲಿ ತಾ. ೧೦ರವರೆಗೆ ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಿದ್ದಾರೆ.

ಎಲ್ಲಾ ೧೦೮ ಮತಗಟ್ಟೆಗಳಿಗೆ ಕೇಂದ್ರ ಸರ್ಕಾರಿ ನೌಕರರನ್ನು ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಮೊಬೈಲ್, ಕ್ಯಾಮರಾ ಹಾಗೂ ಇನ್ನಿತರೆ ಎಲೆಕ್ಟಾçನಿಕ್ ಉಪಕರಣ ಗಳನ್ನು ಮತಗಟ್ಟೆಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆಯ ಒಳಗೆ ಒಬ್ಬ ಮತದಾರ ಮತ ಚಲಾಯಿಸಿ ಹೊರಹೋದ ನಂತರವೇ ಮತ್ತೊಬ್ಬ ಮತದಾರ ಮತ ಚಲಾಯಿಸಬಹುದು. ಮತದಾರರು ಭಾರತ ಚುನಾವಣಾ ಆಯೋಗದ ಗುರುತಿನ ಚೀಟಿಯನ್ನು ಹಾಗೂ ಭಾರತ ಚುನಾವಣಾ ಆಯೋಗ ನಿರ್ದಿಷ್ಟಪಡಿಸಿದ ಇತರ ಯಾವುದೇ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತದಾನವನ್ನು ಮಾಡಬೇಕು.

ಪ್ರತಿ ಮತಗಟ್ಟೆಯಲ್ಲಿ ಸಂಬAಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿ / ಸಿಬ್ಬಂದಿಗಳನ್ನು ಗುರುತು ಹಚ್ಚುವ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಮತದಾರರು ಪ್ರಾಶಸ್ತö್ಯದ ಮತವನ್ನು ಅಭ್ಯರ್ಥಿಗಳಿಗೆ ಚಲಾಯಿ ಸಬಹುದು. ಮತದಾರ ಮತದ ಗೌಪ್ಯತೆಯನ್ನು ಕಾಪಾಡಬೇಕು. ಮತ ಚಲಾಯಿಸಲು ಚುನಾವಣಾಧಿಕಾರಿ ನೀಡಿರುವ ನೇರಳೆ ಬಣ್ಣದ ಪೆನ್ನನ್ನು ಮಾತ್ರ ಬಳಸಬೇಕು.

ಮತದಾರ ಮತ ಚಲಾಯಿಸಿದ ಬಳಿಕ ಮತಪತ್ರವನ್ನು ಪ್ರದರ್ಶಿಸು ವಂತಿಲ್ಲ. ಭಾರತ ಚುನಾವಣಾ ಆಯೋಗವು ಕೊಡಗು ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಸಂಬAಧಿಸಿದAತೆ ಐ.ಎ.ಎಸ್. ಅಧಿಕಾರಿಯಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್. ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿದೆ.