ಕೂಡಿಗೆ, ಡಿ. ೮: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಮೂಲಕ ಹೋಗುವ ಆನೆಕೆರೆಯಿಂದ ಹಾರಂಗಿಯ ಸಂಪರ್ಕ ರಸ್ತೆ ತೀರಾ ಹಾಳಾಗಿದ್ದು, ಗುಂಡಿಮಯವಾಗಿತ್ತು. ಇದರಿಂದಾಗಿ ಈ ರಸ್ತೆಯ ಉಪ ಗ್ರಾಮಗಳಿಗೆ ಹೋಗಲು ಬಾರಿ ತೊಂದರೆ ಆಗುತ್ತಿತ್ತು. ಚಿಕ್ಕತ್ತೂರು ಗ್ರಾಮಸ್ಥರು ಮತ್ತು ಯುವಕರ ತಂಡ ಹಾಗೂ ಗ್ರಾಮ ವಿಕಾಸ ಸಮಿತಿಯ ಸದಸ್ಯರು ಸೇರಿ ಟ್ರಾö್ಯಕ್ಟರ್ ಮೂಲಕ ಮಣ್ಣನ್ನು ತಂದು ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಭಾಗವಹಿಸಿದರು. ಆನೆಕರೆಯಿಂದ ಹಾರಂಗಿ ರಸ್ತೆಯವರೆಗೆ ಮತ್ತು ಅದಕ್ಕೆ ಹೊಂದಿಕೊAಡಿರುವ ಉಪ ರಸ್ತೆಗಳಿಗೆ ಜೆಸಿಬಿ ಯಂತ್ರ ಮೂಲಕ ಎರಡೂ ಟ್ರಾö್ಯಕ್ಟರ್‌ಗಳನ್ನು ಉಪಯೋಗಿಸಿ ಕೊಂಡು ಸಮೀಪದ ಬೆಟ್ಟದಿಂದ ಮಣ್ಣನ್ನು ತುಂಬಿಸಿಕೊAಡು ಬಂದು ಗುಂಡಿಯಾಗಿದ್ದ ರಸ್ತೆಗಳಿಗೆ ಸುರಿದು, ನಂತರ ಸಮತಟ್ಟು ಮಾಡಿ ಸಂಪೂರ್ಣ ವಾಗಿ ದುರಸ್ತಿ ಮಾಡಲಾಯಿತು.

ಗ್ರಾಮಸ್ಥರಾದ ಉದಯ ಕುಮಾರ್, ರಾಮೇಗೌಡ, ಸೋಮಶೇಖರ್, ಶಶಿಧರ್, ದಿನೇಶ್ ಪಿ.ಸಿ., ಸ್ವಾಮಿ, ಅನುಕುಮಾರ್, ಅಕ್ಷಯ್ ಮಂಜುನಾಥ, ಅನಿಲ್, ಗಣೇಶ್, ಸುನಿಲ್‌ಕುಮಾರ್, ಚೇತನ್ ಸೇರಿದಂತೆ ಗ್ರಾಮ ವಿಕಾಸ ಸಮಿತಿಯ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.