ಮಡಿಕೇರಿ, ಡಿ.೮: ಕೊಡವರನ್ನು ಸ್ವತಂತ್ರ ರಾಷ್ಟಿçÃಯ ಜನಾಂಗೀಯ ರೇಷಿಯಲ್ ಬುಡಕಟ್ಟೆಂದು ಸಂವಿಧಾನದಲ್ಲಿ ವಿಶೇಷವಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ನ್ಯಾಷನಲ್ ಡೇಯಲ್ಲಿ ನಿರ್ಣಯ ಕೈಗೊಂಡಿದ್ದು, ಇದರ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಬುಡಕಟ್ಟಿನ ಪ್ರಾಚೀನತೆಯನ್ನು ಅನಾದಿ ಕಾಲದಿಂದಲೂ ಈ ಮಣ್ಣಿನಿಂದ ಉತ್ಪತ್ತಿಯಾದ ವಿಶಿಷ್ಟ, ಪ್ರಾಚೀನ, ರಾಷ್ಟಿçÃಯ ಜನಾಂಗೀಯ, ಆದಿಮ ಸಂಜಾತ ಬುಡಕಟ್ಟು ಜನಾಂಗವೆAದು ಗುರುತಿಸಬೇಕೆಂದು ಆಗ್ರಹಿಸಿದರು.

ನಮ್ಮ ಸಂವಿಧಾನದ ೩೪೦ ಮತ್ತು ೩೪೨ ನೇ ವಿಧಿಯ ಅಡಿಯಲ್ಲಿ ಕೊಡವ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ನೀಡಬೇಕು. ಸಂವಿಧಾನದ ೩೭೧ ನೇ ವಿಧಿಯ ಅಡಿಯಲ್ಲಿ ಕೊಡವರ ಸಾಂಪ್ರದಾಯಿಕ ಜನ್ಮಭೂಮಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ರೂಪಿಸಬೇಕು. ಆರ್ಟಿಕಲ್ ೨೫ ಮತ್ತು ೨೬ ರ ಅಡಿಯಲ್ಲಿ ನಮ್ಮ "ಧಾರ್ಮಿಕ ಸಂಸ್ಕಾರ ಗನ್"/ ಬಂದೂಕಕ್ಕೆ ಸಂವಿಧಾನದ ರಕ್ಷಣೆ ನೀಡಬೇಕು. ಸಂವಿಧಾನದ ೮ನೇ ಶೆಡ್ಯೂಲ್‌ನಲ್ಲಿ ಕೊಡವ ತಕ್ಕ್ನ್ನು ಸೇರಿಸಬೇಕು. ಕೊಡವ ಜಾನಪದ ಸಾಂಸ್ಕöÈತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕöÈತಿಕ ಪರಂಪರೆಯ ಪಟ್ಟಿಯಲ್ಲಿ ಪರಿಗಣಿಸಬೇಕು. ಅಂತರಾಷ್ಟಿçÃಯ ಕೊಡವ ನರಮೇಧ ಸ್ಮಾರಕವನ್ನು ದೇವಟ್‌ಪರಂಬುವಿನಲ್ಲಿ ಸ್ಥಾಪಿಸಬೇಕು.

ಅರಸರ ಕಾಲದಲ್ಲಿ ರಾಜಕೀಯ ಹತ್ಯೆಗೆ ಗುರಿಯಾದ ಕೊಡವರ ನೆನಪಿಗಾಗಿ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದ ನಾಚಪ್ಪ, ಸಂವಿಧಾನದಲ್ಲಿ ಪ್ರತಿಪಾದಿಸಿ ರುವ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಸಾಂವಿಧಾನಿಕ ಪರಿಹಾರದ ಪ್ರಕಾರ ಈ ಕಾನೂನು ಬದ್ಧ ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದರು.

ಶಾAತಿಯುತ ಹೋರಾಟ

ಕಳೆದ ೩೧ ವರ್ಷಗಳಿಂದ ನಿರಂತರವಾಗಿ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬಂದಿರುವ ಸಿಎನ್‌ಸಿ ಗುರಿ ಮುಟ್ಟುವ ತನಕ ವಿರಮಿಸುವುದಿಲ್ಲ. ಕೊಡವ ನ್ಯಾಷನಲ್ ಡೇಯಲ್ಲಿ ಅಂಗೀಕರಿಸಿದ ನಿರ್ಣಯ ಅನುಷ್ಠಾನದ ಪ್ರಾಥಮಿಕ ಹಂತವಾಗಿ ಬೆಳಗಾವಿಯಲ್ಲಿ ನಡೆಯುವ ಕರ್ನಾಟಕ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸತ್ಯಾಗ್ರಹ ನಡೆಸಲು ತಯಾರಿ ನಡೆಸಿತ್ತು. ಆದರೆ ಒಮಿಕ್ರಾನ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ಸಿಎನ್‌ಸಿಯ ಉದ್ದೇಶಿತ ಬೆಳಗಾವಿ ಸತ್ಯಾಗ್ರಹವನ್ನ ಮುಂದೂಡಲಾಗಿದೆ ಎಂದು ತಿಳಿಸಿದರು.

ಗೋತ್ರದಡಿ ಬರುವುದಿಲ್ಲ

ಕೊಡವರನ್ನು ಪರ್ವತ ವಾಸಿಗಳು, ಪರ್ವತ ಕುಲ, ಬುಡಕಟ್ ಎಂದು ಸಂಬೋಧಿಸುತ್ತಿದ್ದರು. ನಾವು ಯಾವುದೇ ಗೋತ್ರದಡಿಯಲ್ಲಿ ಬರುವುದಿಲ್ಲ. ಕೊಡವ ಜನಾಂಗವು ವರ್ಣಾಶ್ರಮ ವ್ಯವಸ್ಥೆ, ವರ್ಣಶಾಸ್ತçದಡಿ ಯಲ್ಲಿ ಬರುವುದಿಲ್ಲ ಮತ್ತು ಚಾತುರ್ವರ್ಣ ವ್ಯವಸ್ಥೆ/ಚತುರ್ಭುಜ ವ್ಯವಸ್ಥೆಗೆ ಯಾವುದೇ ಸ್ಥಾನವಿಲ್ಲ. ನಮ್ಮದು ಒಂದೇ ಜನಾಂಗ, ಜಾತಿ ಅಥವಾ ಉಪಜಾತಿ ವ್ಯವಸ್ಥೆ ಇಲ್ಲ. ಎಲ್ಲಾ ೪ ವರ್ಣಗಳು ಬದಲಿಗೆ ಚಾತುರ್ವರ್ಣ-ಚತುರ್ಭುಜ ವ್ಯವಸ್ಥೆಯು ೮ ಗೋತ್ರಗಳಡಿಯಲ್ಲಿ ಬರುತ್ತದೆ. ಉದಾಹರಣೆಗೆ ಕೆಲವು ಜನರು ಗೋತ್ರ ವ್ಯವಸ್ಥೆಗಳನ್ನು ಹೊಂದಿದ್ದಾರೆ ಅಂದರೆ ೧೦ ಕುಟುಂಬ ೧೮ ಗೋತ್ರಗಳು ಎಂದರು.

ಅನಾದಿ ಕಾಲದಿಂದಲೂ ಆಸ್ತಿಗಳನ್ನು ಹೊಂದಿದ್ದ ಸ್ಥಳೀಯ ಕೊಡವ ಜನಾಂಗದ ಅನುವಂಶಿಕ ಆಸ್ತಿಗಳಿಗೆ ಶಾಸನಬದ್ಧ ಖಾತರಿ ನೀಡುತ್ತಿಲ್ಲ. ಅಷ್ಟೇ ಅಲ್ಲ, ಸರಕಾರ ಮಧ್ಯಪ್ರವೇಶಿಸಿ ಚೆಲ್ಲಾಡುತ್ತಿದೆ ಮತ್ತು ಅದನ್ನು ಜಪ್ತಿ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರ ಒತ್ತುವರಿ ಯೋಜನೆಯಲ್ಲಿ ಆ ಭೂಮಿಯನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಕೊಡವ ಜನಾಂಗದ ಜನಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಇತರರನ್ನು ಮರು-ಜನಸಂಖ್ಯೆಯ ಮೂಲಕ ಜನಸಂಖ್ಯಾ ಬದಲಾವಣೆಯನ್ನು ಪ್ರಾರಂಭಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧವೆ ಪದ್ಧತಿ ಇಲ್ಲ

ಕೊಡವರಲ್ಲಿ ವಿಧವೆಯ ಪದ್ಧತಿ ಇಲ್ಲ. ಸಾಮಾನ್ಯವಾಗಿ ಜನರು ತಮ್ಮ ಹೆಣ್ಣುಮಕ್ಕಳನ್ನು ಕನಿಷ್ಟ ಇಬ್ಬರು ಸಹೋದರರು ಇರುವ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಾಗ, ಒಬ್ಬ ಸಹೋದರನಿಗೆ ಏನಾದರೂ ವಿಪತ್ತು ಸಂಭವಿಸಿದರೆ, ಆಕೆಗೆ ಮತ್ತು ಮಕ್ಕಳಿಗೆ ಭದ್ರತೆಯನ್ನು ಒದಗಿಸಲು ಇನ್ನೊಬ್ಬ ಸಹೋದರನೊಂದಿಗೆ ಮದುವೆ ಮಾಡಬಹುದು. ಆದಿಸ್ವರೂಪ ಕೊಡವ ಜನಾಂಗೀಯ ಸಂಸ್ಕöÈತಿಯು ಪ್ರಗತಿಪರ ಮತ್ತು ವೈಜ್ಞಾನಿಕವಾಗಿದೆ.

ಯಾವುದೇ ವಿಧವಾ ಪದ್ಧತಿ ಮತ್ತು ನಾವು ಋತುಚಕ್ರವನ್ನು ಸೂತಕ ಎಂದು ಪರಿಗಣಿಸುವುದಿಲ್ಲ. ನಮಗೆ ಪಿಂಡ ಪ್ರಧಾನ ಸಂಸ್ಕಾರವಿಲ್ಲ. ಮಾದ ದಿವಸದಲ್ಲಿ (ಮರಣದ ೧೧ನೇ ದಿನ) ಪೊಲ್ಚಿಪಾಟ್ ನಡೆಸಿ ಓಣಿಕೂಟುವ ಆಚರಣೆ ಇರುತ್ತದೆ. ಅದು ಅಂತಿಮ ಮತ್ತು ಸತ್ತ ವ್ಯಕ್ತಿ ಸ್ವರ್ಗವನ್ನು ತಲುಪುವ ಸ್ಪಷ್ಟ ಸಂದೇಶವಾಗಿದೆ ಎಂದು ನಾಚಪ್ಪ ಪ್ರತಿಪಾದಿಸಿದರು.

ಹಕ್ಕೊತ್ತಾಯಗಳನ್ನು ಅನುಷ್ಠಾನಗೊಳಿಸಲು ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ನಿರಂತರವಾಗಿ ಶಾಂತಿಯುತ ಸಭೆ, ಮಂದ್ ಕಾರ್ಯಕ್ರಮ, ಐನ್‌ಮನೆ ಕಾರ್ಯಕ್ರಮ, ದೆಹಲಿ, ಬೆಂಗಳೂರು, ಮಡಿಕೇರಿಯಲ್ಲಿ ಸಭೆ, ಸಮಾರಂಭ ಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ವಿಶ್ವ ರಾಷ್ಟçಸಂಸ್ಥೆ ಘೋಷಿಸಿರುವ ಎಲ್ಲಾ ಪ್ರಮುಖ ಅಂರ‍್ರಾಷ್ಟಿçÃಯ ದಿನಗಳನ್ನು ಮತ್ತು ಕೊಡವರ ಎಲ್ಲಾ ಪ್ರಾಚೀನ ಹಬ್ಬಗಳನ್ನು ಅದರ ಮೂಲ ಶಾಸ್ತಿçÃಯ ಬುಡಕಟ್ಟು ಪದ್ಧತಿಯಂತೆ ನಡೆಸುವುದನ್ನು ಮುಂದುವರಿಸಲಿದ್ದೇವೆ ಎಂದು ನಾಚಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಎನ್‌ಸಿ ಪ್ರಮುಖ ಚಂಬAಡ ಜನತ್‌ಕುಮಾರ್ ಉಪಸ್ಥಿತರಿದ್ದರು.