ಶನಿವಾರಸಂತೆ, ಡಿ. ೭: ಸ್ಥಳೀಯ ರೋಟರಿ ಸಂಸ್ಥೆ ಪದಾಧಿಕಾರಿಗಳ ತಂಡ ಹುಣಸೂರಿನ ರೋಟರಿ ಸಂಸ್ಥೆ ಆಯೋಜಿಸಿದ್ದ ವಲಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಥಾನ ಗಳಿಸಿ, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಟೂರ್ನಿಯ ನಾಯಕ ಸಾಗರ್, ತಂಡದ ನಾಯಕ ದಿವಾಕರ್, ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಪಿ. ಮೋಹನ್, ಕಾರ್ಯದರ್ಶಿ ಎಂ.ಎನ್. ವಸಂತ್, ನಿರ್ದೇಶಕರು, ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.