ಶನಿವಾರಸಂತೆ, ಡಿ. ೭: ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮತಗಳು ಅಸಿಂಧುಗೊಳ್ಳದAತೆ ಮುಂಜಾಗ್ರತೆ ವಹಿಸಿ, ಮತದಾನ ಮಾಡಲು ಸದಸ್ಯರಿಗೆ ಅಣಕು ಮತದಾನ, ಮತ ಸಿಂಧು-ಅಸಿAಧು ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಮಾಹಿತಿ ನೀಡಿ, ಚುನಾವಣಾ ಆಯೋಗದ ಆದೇಶ, ಸೂಚನೆ, ಮತದಾನ ಮಾಡುವ ಬಗ್ಗೆ ತಿಳಿಸಿದರು.
ಪಂಚಾಯಿತಿ ಅಧ್ಯಕ್ಷೆ ಸರೋಜಾ ಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಫರ್ಜಾನ್, ಗೀತಾ, ಸರಸ್ವತಿ, ಕಾವೇರಿ, ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ಸರ್ದಾರ್ ಅಹಮ್ಮದ್, ಕಾರ್ಯದರ್ಶಿ ತಮ್ಮಯ್ಯಾಚಾರ್, ಸಿಬ್ಬಂದಿ ಹಾಜರಿದ್ದರು.