*ಸಿದ್ದಾಪುರ ಡಿ.೬ : ಸಿದ್ದಾಪುರ- ಮಡಿಕೇರಿ ರಸ್ತೆಯ ಶ್ರೀ ಸುಬ್ರಮಣ್ಯ ಸ್ವಾಮಿ ಹಾಗೂ ಶ್ರೀ ಅರ್ಧನಾರೀಶ್ವರ ದೇವಾಲಯದಲ್ಲಿ ೨೨ ನೇ ವರ್ಷದ ಸುಬ್ರಮಣ್ಯ ಷಷ್ಠಿ ಉತ್ಸವ ತಾ.೯ ರಂದು ನಡೆಯಲಿದೆ.
ಅಂದು ಮುಂಜಾನೆಯಿAದಲೇ ಅಭಿಷೇಕ, ಅಲಂಕಾರ, ಹೋಮ ಹವನಾದಿ ಪೂಜೆ ನೆರವೇರಲಿದೆ. ಮಹಾಪೂಜೆ ಮತ್ತು ಮಹಾಮಂಗಳಾರತಿಯ ನಂತರ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ ಎಂದು ದೇವಾಲಯದ ಪ್ರಮುಖರಾದ ಕೆ.ಎಂ.ಮಣಿ ತಿಳಿಸಿದ್ದಾರೆ.