ಮಡಿಕೇರಿ, ಡಿ.೭; ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕೊಲೆ, ಸುಲಿಗೆ, ಅಪರಾಧ., ಹಲ್ಲೆ, ಜಗಳ., ದೊಂಬಿ., ಗಲಭೆ, ವಾಹನ ದಟ್ಟಣೆ ನಿಯಂತ್ರಣ.., ಹೀಗೇ ಜಂಜಾಟದಲ್ಲೇ ಕಾನೂನು ಪಾಲನೆಯಲ್ಲಿ ನಿರತರಾಗಿರುವ ಆರಕ್ಷಕರು ತಮ್ಮ ಟೋಪಿ, ಲಾಠಿ, ಖಾಕಿ-ಬಿಳಿ ಸಮವಸ್ತçಗಳನ್ನು ಕಳಚಿಟ್ಟು ತಮ್ಮದೇ ಆದ ಟಿ ಶರ್ಟ್-ಟ್ರಾö್ಯಕ್ ಪ್ಯಾಂಟ್‌ಗಳನ್ನು ಧರಿಸಿ, ಅಧಿಕಾರಿ, ಸಿಬ್ಬಂದಿಗಳು ಎಂಬ ಬೇಧಭಾವವಿಲ್ಲದೆ, ಮೈದಾನವಿಡೀ ಓಡಾಡುತ್ತಾ., ಆಡಿ ನಲಿದು ಸಂಭ್ರಮಿಸಿದರು.., ಹಿರಿಯ ಅಧಿಕಾರಿಗಳು ಕಿರಿಯರನ್ನು ಪ್ರೋತ್ಸಾಹಿಸುತ್ತಾ ಹುರಿದುಂಬಿಸು ತ್ತಿದ್ದುದು ಅವರುಗಳಲ್ಲಿನ ಕ್ರೀಡಾ ಸ್ಫೂರ್ತಿಯನ್ನು ಬಿಂಬಿಸುತ್ತಿತ್ತು..,

ದಿನವಿಡೀ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸರು ಪೊಲೀಸರಿಗಾಗಿಯೇ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಪೊಲೀಸ್

(ಮೊದಲ ಪುಟದಿಂದ) ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ತಾವೂ ಇತರ ಕ್ರೀಡಾಪಟುಗಳಿಗಿಂತ ಕಡಿಮೆ ಇಲ್ಲವೆಂಬAತೆ ನಿರೂಪಿಸಿದರು. ಶಿಸ್ತುಬದ್ಧವಾಗಿ ನಡೆದ ಕ್ರೀಡಾಕೂಟದಲ್ಲಿ ಮಹಿಳೆಯರಾದಿಯಾಗಿ ಹಿರಿಯರೂ ಪಾಲ್ಗೊಂಡು ಸಂಭ್ರಮಿಸಿದರು. ಓಟ, ಜಿಗಿತ, ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್., ಕ್ರಿಕೆಟ್, ಭಾರದ ಗುಂಡು ಎಸೆತ.., ಹೀಗೇ ಎಲ್ಲ ವಿಭಾಗಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ಶಾಲೆಯಲ್ಲಿ ಕ್ರೀಡೆ ಕಡ್ಡಾಯವಾಗಬೇಕು

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅಂತರರಾಷ್ಟಿçಯ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮಾತನಾಡಿ, ಎಲ್ಲಾ ಶಾಲೆಗಳಲ್ಲೂ ಕ್ರೀಡೆ ಕಡ್ಡಾಯವಾಗಬೇಕು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದರಿಂದ ಸಕರಾತ್ಮಕ ಚಿಂತನೆಗಳು ಮೂಡುತ್ತವೆ, ಶಿಸ್ತು ಕಲಿಸುತ್ತದೆ, ಸಾಧನೆಯೊಂದಿಗೆ ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ತಾನು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವದು ಹೆಮ್ಮೆ ತರಿಸಿದೆ, ಪೋಷಕರ ಸಹಕಾರದಿಂದ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ಜಿಲ್ಲೆಯಲ್ಲಿ ಕ್ರೀಡಾ ವಿವಿ ಸ್ಥಾಪನೆಯಾದಲ್ಲಿ ಹಲವಷ್ಟು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಸಹಕಾರಿಯಾಗಲಿದೆ, ಇದಕ್ಕೆ ತನ್ನ ಸಹಮತವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯ ಅರುಣ್ ಶೆಟ್ಟಿ, ರೋಹನ್ ಬೋಪಣ್ಣ ಕುಟುಂಬಸ್ಥರು, ಇತರರು ಪಾಲ್ಗೊಂಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸ್ವಾಗತಿಸಿದರು. ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ವಂದಿಸಿದರು.