ನಾಪೋಕ್ಲು, ಡಿ. ೬: ಜಿಲ್ಲೆಯ ಬೆಳೆಗಾರರು ಅತಿವೃಷ್ಟಿ ನಷ್ಟ ಪರಿಹಾರದ ಅರ್ಜಿಗಳನ್ನು ನೀಡಲು ತಾ. ೭ ರಂದು ಜಿಲ್ಲಾಡಳಿತ ಗಡುವು ನೀಡಿತ್ತು. ಈ ಅವಧಿಯನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸುವಂತೆ ಜಿಲ್ಲಾ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಮನವಿ ಮಾಡಿದ್ದಾರೆ.

ಈಗಷ್ಟೇ ಅನೇಕ ಗ್ರಾಮಗಳನ್ನು ಪರಿಹಾರದ ಪಟ್ಟಿಯಲ್ಲಿ ಹೊಸದಾಗಿ ಸೇರಿಸಲಾಗಿದೆ. ಗ್ರಾಮಸ್ಥರುಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶದ ಅಗತ್ಯವಿರುವುದಾಗಿ ಅವರು ಮಾಹಿತಿಯಿತ್ತಿದ್ದಾರೆ.