ಗುಡ್ಡೆಹೊಸೂರು, ಡಿ. ೬: ಇಲ್ಲಿನ ಅರೆಭಾಷೆ ಗೌಡಸಂಘದ ಮಹಾಸಭೆ ಯು ಸಂಘದ ಅಧ್ಯಕ್ಷ ಪಳಂಗಾಯ ಎಲಿಯಣ್ಣ ಅವರ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ನಡುಗಲ್ಲು ಬಾಲಕೃಷ್ಣ, ಸಹ ಕಾರ್ಯದರ್ಶಿ ಗುಡ್ಡೆಮನೆ ರವಿ, ಖಜಾಂಚಿ ಅಚ್ಚಾಂಡಿರ ತಾರ ಹೇಮರಾಜ್, ನಿರ್ದೇಶಕರಾದ ಬೊಮ್ಮುಡಿ ಬಾಲಕೃಷ್ಣ, ಗುರುಪ್ರಸಾದ್, ಕುಡೆಕಲ್ ರೂಪ ನಿತ್ಯಾನಂದ, ಪುದಿಯನೆರವನ ಪದ್ಮಾವತಿ, ಸಲಹಾ ಸಮಿತಿ ಸದಸ್ಯರಾದ ಅಚ್ಚಾಂಡಿರ ಹೇಮರಾಜ್, ಕೋಡಿ ಪೂವಯ್ಯ, ಕರ್ಣಯ್ಯನ ಬಾಲಕೃಷ್ಣ, ಬಿರುಮಣನ ಸಣ್ಣಯ್ಯ ಉಪಸ್ಥಿತರಿದ್ದರು. ಈ ಸಂದರ್ಭ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಪಡೆದ ಮತ್ತು ನೃತ್ಯದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸ ಲಾಯಿತು. ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಪಡೆದ ಬೆಟ್ಟಗೇರಿಮನೆ ಅಣ್ಣಯ್ಯ ಭವಾನಿಯವರ ಪುತ್ರಿ ಕುಶಿ ಮತ್ತು ಕುಡೆಕಲ್ ಗಣೇಶ ಮಾಲಿನಿ ದಂಪತಿ ಪುತ್ರಿ ಕೆ.ಜಿ.ಶಿವಾನಿ ಮತ್ತು ನೃತ್ಯದಲ್ಲಿ ಸಾಧನೆ ಮಾಡಿದ ಕೇಡನ ಸೋಮಣ್ಣ ವಿಶಾಲಾಕ್ಷಿ ಅವರ ಪುತ್ರಿ ಪ್ರಗತಿ ಮತ್ತು ಹೊಸೋಕ್ಲು ಉದಯ ಅವರ ಪುತ್ರಿ ನಿಧಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ನಿವಾಸಿ ಬಿ.ಎಸ್.ಧನಪಾಲ್ ಅವರ ಪುತ್ರಿ ಬಾಲ್ ಬ್ಯಾಡ್ ಮಿಂಟನ್‌ನಲ್ಲಿ ಅಂತರಾಷ್ಟçಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗೂ ಕಳೆದ ಸಾಲಿನಲ್ಲಿ ರಾಜ್ಯೋತ್ಸವ "ಕ್ರೀಡಾರತ್ನ" ಪಡೆದ ಬಿ.ಡಿ.ಲಾವಣ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಗೌಡ ಜನಾಂಗದ ಆಚಾರ, ವಿಚಾರ, ಪರಂಪರೆ, ಬಗ್ಗೆ ಜಿ.ಎಂ.ಮಣಿಕುಮಾರ್ ಮತ್ತು ಚಂಡಿರ ಮಂಜುನಾಥ್ ಮಾತನಾಡಿದರು. ಜಿ.ಟಿ.ರವಿ ಸ್ವಾಗತಿಸಿದರು. ಕುಡೆಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿ ಸರ್ವರನ್ನು ವಂದಿಸಿದರು. ಈ ಸಂದರ್ಭ ಗುಡ್ಡೆಮನೆ ವಿಶುಕುಮಾರ್ ಅವರು ಉಪಾಧ್ಯಕ್ಷರಾಗಿ ಆಯ್ಕೆ ಯಾದರು. ಕಾರ್ಯದರ್ಶಿಯಾಗಿ ತಾರಹೇಮರಾಜ್, ನಿರ್ದೇಶಕರಾಗಿ ಬೈಲೆ ಮಾಚಮ್ಮ ಮತ್ತು ಮಂಚನಮನೆ ಗೀತ, ಖಜಾಂಜಿಯಾಗಿ ರೂಪ ನಿತ್ಯಾನಂದ ಆಯ್ಕೆಯಾದರು.