ಮಡಿಕೇರಿ, ಡಿ. ೫: ಬಿಳಿಗೇರಿ ಗ್ರಾಮದ ಕಿರುಹೊಳೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಪೊಲೀಸರು ಮತ್ತು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾ. ೪ ರಂದು ಖಚಿತ ಮಾಹಿತಿ ಮೇರೆ ಡಿಸಿಐಬಿ ಪೊಲೀಸರು ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಬಿಳಿಗೇರಿ ಗ್ರಾಮದ ಕಿರುಹೊಳೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಪತ್ತೆಹಚ್ಚಿ ಸ್ಥಳದಲ್ಲಿ ಮರಳು ತುಂಬಿ ನಿಂತಿದ್ದ ಮಿನಿ ಟಿಪ್ಪರ್, ಕಿರುಹೊಳೆ ದಡದಲ್ಲಿ ಸಂಗ್ರಹಿಸಲಾದ ಸುಮಾರು ೨ ಮಿನಿ ಟಿಪ್ಪರ್‌ಗಳಷ್ಟು ಮರಳು ಹಾಗೂ ಒಂದು ಕಬ್ಬಿಣದ ತೆಪ್ಪವನ್ನು ವಶಕ್ಕೆ ಪಡೆದು ಮರಳುಗಾರಿಕೆ ನಡೆಸುತ್ತಿದ್ದವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ, ಮಡಿಕೇರಿ ಉಪವಿಭಾಗ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಗುಪ್ತಚರ ದಳದ

ಬಿಳಿಗೇರಿಯಲ್ಲಿ ಅಕ್ರಮ ಮರಳುಗಾರಿಕೆ

(ಮೊದಲ ಪುಟದಿಂದ) ಪೊಲೀಸ್ ಇನ್ಸ್ಪೆಕ್ಟರ್ ಐ.ಪಿ. ಮೇದಪ್ಪ, ಮಡಿಕೇರಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಸ್. ರವಿಕಿರಣ್, ಡಿಸಿಐಬಿ ಎಎಸ್‌ಐ ಹಮೀದ್, ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶರತ್ ರೈ, ಅನಿಲ್ ಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ಸಿಬ್ಬಂದಿ ಕೆ.ಡಿ. ದಿನೇಶ್ ಹಾಗೂ ಚಾಲಕರುಗಳಾದ ಶಶಿಕುಮಾರ್, ಅಭಿಲಾಷ್ ಮತ್ತು ಪ್ರವೀಣ್ ಇದ್ದರು.